ರಾಯಚೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ತೆಗೆದಿರಿಸಲು ಒಪ್ಪದ 14 ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಣೆ
ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ತೆಗೆದಿರಿಸಲು ಒಪ್ಪದ ಸುಮಾರು 14 ವಿದ್ಯಾರ್ಥಿನಿಯರನ್ನು ತರಗತಿಗಳಿಗಳಿಗೆ ಪ್ರವೇಶ ನಿರಾಕರಿಸಲಾಯಿತು.
ಹಿಜಾಬ್ ಧರಿಸಿ ಕಾಲೇಜು ಕ್ಯಾಂಪಸ್‌ಗೆ ಬಂದಿದ್ದ ವಿದ್ಯಾರ್ಥಿನಿಯರು ತರಗತಿಗೆ ಹೊಗುವ ಮುನ್ನ ಹಿಜಾಬ್ ತೆಗೆದಿರಿಸಲು ಉಪನ್ಯಾಸಕರು ತಾಕೀತು ಮಾಡಿದರು. ವಿದ್ಯಾರ್ಥಿನಿಯರು ಕ್ಯಾಂಪಸ್ ನಲ್ಲೇ ಒಂದು ಗಂಟೆಗೂ ಅಧಿಕ ಸಮಯ ಪರಸ್ಪರ ಚರ್ಚಿಸುತ್ತಾ ನಿಂತು, ಆನಂತರ ಕ್ಯಾಂಪಸ್ ನಿಂದ ಹೊರಬಂದರು.




