ಬೆಳ್ತಂಗಡಿ: ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ಆಕ್ಟಿವಾ ವಾಹನ ಕಳವು ಪ್ರಕರಣ: ಒಬ್ಬ ಆರೋಪಿಯ ಬಂಧನ
ಬೆಳ್ತಂಗಡಿ: ಮನೆಯ ಹೊರಗಡೆ ನಿಲ್ಲಿಸಿದ್ದ ಆಕ್ಟೀವಾ ವಾಹನ ಮತ್ತು ಮನೆಯಿಂದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿಯ ಉಜಿರೆ ತಾಲೂಕಿನ
ಕಕ್ಕೆಜಾಲು ಸುಲೈಮಾನ್ ಸಾಹೇಬ್ ಎಂಬವರು ಜನವರಿ 22 ರಂದು ತನ್ನ ಮನೆಗೆ ಬೀಗ ಭದ್ರತೆಯನ್ನು ಮಾಡಿಕೊಂಡು ಸಂಸಾರ ಸಮೇತ ಭದ್ರಾವತಿಗೆ ಹೋಗಿದ್ದರು.
ಮರುದಿನ ವಾಪಾಸು ಬಂದು ನೋಡಿದಾಗ ಮನೆಯ ಸಿಟೌಟ್ ನಲ್ಲಿ ಇರಿಸಿದ್ದ ಆಕ್ಟೀವಾ 6 ಜಿ ಕೆಎ ದ್ವಿ ಚಕ್ರ ವಾಹನ ಇಲ್ಲದೇ ಇದ್ದು, ಮನೆಯ ಒಳಗೆ ಬಂದು ನೋಡಿದಾಗ ಮನೆಯ ಮಾಡಿನ ಹಂಚನ್ನು ಯಾರೋ ಕಳ್ಳರು ತೆಗೆದು ಒಳ ಪ್ರವೇಶಿಸಿ ಗೋಡ್ರೇಜ್ ಚೆಲ್ಲಾಪಿಲ್ಲಿಯಾಗಿದ್ದು, ಗೋಡ್ರೇಜ್ ನಲ್ಲಿದ್ದ ನಗದು ರೂ 60,000, 1 ಜೊತೆ ಕಿವಿಯೋಲೆ, 2 ಉಂಗುರಗಳು , ನೋಕಿಯಾ ಕಂಪೆನಿಯ ಸಣ್ಣ ಮೊಬೈಲ್ ಹಾಗೂ ಒಳಗಿದ್ದ ಆಕ್ಟೀವಾ 6ಜಿ ದ್ವಿ ಚಕ್ರ ವಾಹನದ ಕೀಯನ್ನು ಕದ್ದು ಮನೆಯ ಸಿಟೌಟ್ ನಲ್ಲಿದ್ದ ಆಕ್ಟೀವಾ 6ಜಿ ಸಮೇತ ಕಳವು ಮಾಡಿಕೊಂಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿ ಮುಂಡಾಜೆ ಗ್ರಾಮದ ಚೆನ್ನಿಗುಡ್ಡೆ ನಿವಾಸಿ ಇಂತಿ @ ಇಂತಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ಆರೋಪಿತನಿಂದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.