February 2, 2026

ಉಡುಪಿ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮೃತ್ಯು

0
Screenshot_20220119-195547_Chrome.jpg

ಉಡುಪಿ: ಬ್ರಹ್ಮಾವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಜನವರಿ 19, ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಅಪಘಾದಲ್ಲಿ ತೀವ್ರವಾಗಿ ಗಾಯಾಗೊಂಡಿದ್ದ ಸರಿತಾ ಪಿಂಟೊ (38) ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ.

ಇವರು ಸೋಮವಾರ ಕೋಟದಲ್ಲಿರುವ ತನ್ನ ತಂದೆ-ತಾಯಿ ಮನೆಗೆ ಕಳೆದ ಕೆಲವು ದಿನಗಳ ಹಿಂದೆ ಕುವೈಟ್ ನಿಂದ ಆಗಮಿಸಿದ ಪತಿ ಅನಿಲ್ ಪಿಂಟೊ ಮತ್ತು 3 ವರ್ಷದ ಮಗುವಿನೊಂದಿಗೆ ದ್ವಿಚಕ್ರದಲ್ಲಿ ತೆರಳುತ್ತಿದ್ದ ವೇಳೆ ಬ್ರಹ್ಮಾವರದ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಅವರು ಇಂದು ಬಲಿಯಾಗಿದ್ದಾರೆ.

ಮಗ ಮತ್ತು ಪತಿ ಸಣ್ಣ ಪುಟ್ಟ ಗಾಯಾಗಳೊಂದಿಗೆ ಪಾರಾಗಿದ್ದಾರೆ, ತಲೆಗೆ ತೀವ್ರವಾಗಿ ಗಾಯಾಗೊಂಡಿದ್ದ ಸರಿತಾರನ್ನು ಮಣಿಪಾಲದ ಕೆಎಂಸಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ 2 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!