February 1, 2026

ಬಂಟ್ವಾಳ ನೂತನ ಡಿವೈಎಸ್ಪಿಯಾಗಿ ಪ್ರತಾಪ್ ಥೋರಾಟ್ ನೇಮಕ

0
image_editor_output_image296446647-1642588903731.jpg

ಬಂಟ್ವಾಳ: ಡಿ.ವೈ.ಎಸ್.ಪಿ.ಯಾಗಿ ಪ್ರತಾಪ್ ಥೋರಾಟ್ ರವರು ಜ.19 ರಂದು ಅಧಿಕಾರ ಸ್ವೀಕಾರ ಮಾಡಿದರು.

ಡಿ.ಎಸ್.ಪಿ.ವೆಲೆಂಟೈನ್ ಡಿ.ಸೋಜ ಅವರ ವರ್ಗಾವಣೆ ಬಳಿಕ ಎ.ಎಸ್.ಪಿ‌.ಶಿವಾಂಶು ರಜಪೂತ್ ಅವರ ನೇಮಕ ಮಾಡಲಾಗಿತ್ತು. ಆದರೆ ಅವರಿಗೆ ಹೆಚ್ಚಿನ ತರಬೇತಿಯ ಹಿನ್ನೆಲೆಯಲ್ಲಿ ಅವರು ತರಬೇತಿಗಾಗಿ ಹೋಗಿರುವುದರಿಂದ ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಪ್ರತಾಪ್ ಥೋರಾಟ್ ಅವರನ್ನು ನೇಮಕ ಮಾಡಲಾಗಿದೆ.

ಅನುಭವಿ ಪೋಲೀಸ್ ಅಧಿಕಾರಿಯಾಗಿ ಅನೇಕ ಕಡೆಗಳಲ್ಲಿ ಸಿ.ಸಿಬಿ ಸಹಿತ ವಿವಿಧ ವಿಂಗ್ ಗಳಲ್ಲಿ ಕೆಲಸ ಮಾಡಿ ಹೆಸರು ಪಡೆದ ಓರ್ವ ದಕ್ಷ ಅಧಿಕಾರಿಯಾಗಿದ್ದಾರೆ. ಬೆಂಗಳೂರು, ಕಾರವಾರ, ಬೆಳಗಾಂ, ಬಳ್ಳಾರಿಯಲ್ಲಿ ಇವರು ಕೆಲಸ ಮಾಡಿ ಇದೀಗ ಬೆಂಗಳೂರು ಟೆರರಿಸ್ಟ್ ಸ್ಕಾಡ್ ನಿಂದ ಬಂಟ್ವಾಳ ಡಿ.ವೈ.ಎಸ್.ಯಾಗಿ ವರ್ಗಾವಣೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!