February 4, 2026

ನೆಲ್ಯಾಡಿ: ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಕೀ ಯನ್ನು ಬಳಸಿ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

0
images-55.jpeg

ನೆಲ್ಯಾಡಿ: ಆಟೋ ರಿಕ್ಷಾ ಚಾಲಕನೋರ್ವ ತನ್ನ ಆಟೋದಲ್ಲಿ ಮರೆತು ಬಿಟ್ಟುಹೋಗಿದ್ದ ಮನೆಯ ಬೀಗದ ಕೀಯನ್ನು ಕದ್ದೊಯ್ದ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಕೊಕ್ಕಡದಲ್ಲಿ ನಡೆದಿದೆ.

ಕೊಕ್ಕಡ ಬಲಿಪಗುಡ್ಡೆ ನಿವಾಸಿ ಅಶೋಕ ಎಂಬವರು ತನ್ನ ಆಟೋ ರಿಕ್ಷಾವನ್ನು ಕೊಕ್ಕಡದಲ್ಲಿ ನಿಲ್ಲಿಸಿ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಮನೆಯ ಬೀಗದ ಕೈ ಅನ್ನು ರಿಕ್ಷಾದಲ್ಲಿಯೇ ಮರೆತು ಹೋಗಿದ್ದು, ಮರಳಿ ಬಂದು ನೋಡಿದಾಗ ಕೀ ಕಾಣೆಯಾಗಿತ್ತು. ಬಳಿಕ ಮನೆಗೆ ತೆರಳಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನ ಬೀಗ ಒಡೆದು ಅದರಲ್ಲಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!