ಆರೆಸ್ಸೆಸ್ ಎಂದರೆ ಇಡೀ ಹಿಂದೂ ಸಮಾಜ: ಮೋಹನ್ ಭಾಗವತ್
ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರೆ ಇಡೀ ಹಿಂದೂ ಸಮಾಜ ಎಂದು ಆರ್ ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ನಗರದ ಅಮಿತಕರ್ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಕ್ರಾಂತಿ ಉತ್ಸವ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರನ್ನು ಉದ್ದೇಶಿಸಿ ಆನ್‌ಲೈನ್ ಮೂಲಕ ಭಾಷಣ ಮಾಡಿದ ಅವರು, ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾದರೆ ಯಾವುದೇ ಸಮಸ್ಯೆ ಉದ್ಭವಿಸುವುದೇ ಇಲ್ಲ ಎಂದರು.
ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದೆ. ಇದರಲ್ಲಿ ಹಿಂದೂಗಳ ಸಂಖ್ಯೆಯೇ 100 ಕೋಟಿ ಎಂದು ಹೇಳುತ್ತೇವೆ. ಕೇವಲ ಶೇ.1ರಷ್ಟು ಕೂಡ ಸಂಘದಲ್ಲಿ ಇಲ್ಲ. ಹೀಗಾಗಿ ಸಂಘದ ಶಾಖೆಗಳಲ್ಲಿ ಎಷ್ಟು ಜನರಿದ್ದೇವೆ? ಎಷ್ಟು ಸ್ವಯಂ ಸೇವಕರಿದ್ದೇವೆ ಎಂಬ ಬಗ್ಗೆ ಮನನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.




