February 4, 2026

ಕಲಬುರಗಿ: ತಲೆ ಮೇಲೆ ಗ್ಯಾಸ್ ಸಿಲಿಂಡರ್ ಎತ್ತಿ ಹಾಕಿ ಪತ್ನಿಯ ಕೊಲೆ

0
Screenshot_2022-01-14-11-45-44-02_680d03679600f7af0b4c700c6b270fe7.jpg

ಕಲಬುರಗಿ: ನಗರದ ಓಜಾ ಲೇಔಟ್‌ನಲ್ಲಿ ಗುರುವಾರ ತಡರಾತ್ರಿ ಪತಿಯೇ ಪತ್ನಿಯ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.

ಆರತಿ ರಾಠೋಡ (28) ಕೊಲೆಯಾದವರು. ಪತಿ ತಾರಾಸಿಂಗ್ ರಾಠೋಡ ಆರೋಪಿ.

9 ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಆರತಿ ಅವರು ಪದೇಪದೇ ತವರು ಮನೆಗೆ ಹೋಗುತ್ತಾರೆ ಎಂಬ ಕಾರಣಕ್ಕೆ ಆಗಾಗ ತಂಟೆಗಳು ನಡೆಯುತ್ತಿದ್ದವು. ಗುರುವಾರ ಕೂಡ ಸಂಕ್ರಾಂತಿ ಹಬ್ಬಕ್ಕೆ ತವರು ಮನೆಗೆ ಹೋಗುವ ವಿಚಾರವಾಗಿ ಪತಿ, ಪತ್ನಿ ಮಧ್ಯೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ತಾರಾಸಿಂಗ್ ರಾತ್ರಿ ಪತ್ನಿ ಮಲಗಿದ್ದಾಗ ಅವರ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿದ. ತೀವ್ರ ರಕ್ತಸ್ರಾವದಿಂದ ಪತ್ನಿ ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!