March 23, 2026

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಣ: ದೂರು ದಾಖಲು

0
image_editor_output_image-547479043-1642054574573.jpg

ಕುಷ್ಟಗಿ: ತಾಲೂಕಿನ‌ ಕಲಾಲಬಂಡಿ ಗ್ರಾಮದಲ್ಲಿ ‌ಅಪ್ರಾಪ್ತ ಬಾಲಕಿಯ ಅಪಹರಿಸಿದ್ದ ಬಗ್ಗೆ ಪಾಲಕರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಸ್ಸೆಸ್ಸೆಲ್ಸಿ ಓದುತ್ತಿದ್ದ ಬಾಲಕಿ ಮನೆಯಿಂದ ಕಳೆದ ಡಿ.25 ರಂದು ಕಾಣೆಯಾಗಿದ್ದಾಳೆ. ಬಾಲಕಿ‌‌ ಪತ್ತೆಗೆ ಪಾಲಕರು ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಷ್ಟಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಬಾಲಕಿ ಮನೆಯಿಂದ ನಾಪತ್ತೆಯಾದಾಗ ಹಸಿರು ಬಣ್ಣದ ಚೂಡಿದಾರ ಧರಿಸಿದ್ದು, 4’6 ಎತ್ತರ ದುಂಡು ಮುಖ‌ ಅಗಲ‌ ಕಣ್ಣು, ಗೋದಿ ಮೈ ಬಣ್ಣ ಹೊಂದಿದ್ದು ಬಾಲಕಿ ಪತ್ತೆಗೆ ಕ್ರಮ ಕೈಗೊಳ್ಳಲು ಸ್ಥಳೀಯ ಠಾಣೆಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅದೇ ಗ್ರಾಮದ ರಾಜೇಸಾಬ್ ಬಡೇಸಾಬ ಮಾಲಿಪಾಟೀಲ ಯುವಕನ ಬಗ್ಗೆ ಸಂಶಯ ವ್ಯಕ್ತಪಡಿಸಿ ಪಾಲಕರು ದೂರು ದಾಖಲಿಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!