February 3, 2026

ಮದುವೆ ವಾಹನದಂತೆ ಸಿಂಗರಿಸಿ ಇನ್ನೋವಾ ಕಾರಿನಲ್ಲಿ ಅಕ್ರಮ ಗೋ ಸಾಗಾಟ

0
IMG-20220112-WA0006.jpg

ಉಡುಪಿ: ಇನೋವಾ ವಾಹನವೊಂದನ್ನು ಮದುವೆ ವಾಹನದಂತೆ ಸಿಂಗರಿಸಿ ಎಸ್ಕಾರ್ಟ್ ಮಾಡಿಕೊಂಡು ಪ್ಲಾನ್ ಮಾಡಿ ಜಾನುವಾರು ಸಾಗಾಟ ಮಾಡುತ್ತಿದ್ದ ಸಂದರ್ಭ ಪೊಲೀಸರ ಕಣ್ಣಿಗೆ ಮಣ್ಣೆರಚಲು ಹೋದ ಗೋಕಳ್ಳರು ಸಿಕ್ಕಿಬಿದ್ದ ಘಟನೆ ಶಿರ್ವ ಗ್ರಾಮದಲ್ಲಿ ನಡೆದಿದೆ.

ಶಿರ್ವ ವ್ಯಾಪ್ತಿಯ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದಾಗ ಇನೋವಾ ವಾಹನವೊಂದನ್ನು ಮದುವೆ ವಾಹನದಂತೆ ಸಿಂಗರಿಸಿ ಪಿಕಪ್ ವಾಹನಕ್ಕೆ ಎಸ್ಕಾರ್ಟ್ ಆಗಿ ಬಳಸಿ 16 ದನಗಳನ್ನು ಸಾಗಿಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಇವುಗಳ ಪೈಕಿ 2 ದನಗಳು ಸಾವನ್ನಪ್ಪಿದ್ದು, ನಾಲ್ಕು ದನಗಳಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!