November 27, 2026

ಹೃದಯಾಘಾತಕ್ಕೆ ಎಲ್‌ಎಲ್‌ಬಿ ವಿದ್ಯಾರ್ಥಿ ಬಲಿ

62653fc6-a4fc-42a6-b3d7-5e7ee15dc06a

ಧಾರವಾಡ: ಹೃದಯಾಘಾತದಿಂದ ಎಲ್‌ಎಲ್‌ಬಿ ಓದುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಸಮರ್ಥ್ ದೇಶಪಾಂಡೆ (22) ಮೃತ ವಿದ್ಯಾರ್ಥಿ. ಧಾರವಾಡದ ಹಿರಿಯ ವಕೀಲರ ಮಗನಾಗಿದ್ದ ಸಮರ್ಥ್ ಎಲ್‌ಎಲ್‌ಬಿ ಕೊನೆಯ ವರ್ಷ ಓದುತ್ತಿದ್ದ. ಸಮರ್ಥ ತಂದೆ ಅನೂಪ್ ದೇಶಪಾಂಡೆ ಸಹಕಾರಿ ಸಂಘಗಳ ಕೇಸ್ ನಡೆಸುತಿದ್ದರು.

ಮೃತ ಸಮರ್ಥ್ ಅಂತ್ಯಕ್ರಿಯೆ ಧಾರವಾಡ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಮಧ್ಯಾಹ್ನ ನಡೆಯಲಿದೆ.

error: Content is protected !!