ವಿಟ್ಲ: ವಿಟ್ಲ ದೇವತಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 55ನೇ ವರ್ಷದ ಶ್ರೀ ಶಾರದಾ ಮಹೋತ್ಸವದ ಶೋಭಾಯಾತ್ರೆಯಲ್ಲಿ ಬಂದ ಜನರಿಗೆ ವಿಟ್ಲದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿರುವ ಕಿಟ್ ಕ್ಯಾಟ್ ಪೆಟ್ ಶಾಪ್ ವತಿಯಿಂದ ತಂಪು ಪಾನೀಯ ವಿತರಿಸಲಾಯಿತು.
ಅಂಗಡಿ ಮಾಲಕ ಇಸ್ಮಾಯಿಲ್ ಒಕ್ಕೆತ್ತೂರು ಅವರು ತಮ್ಮ ಅಂಗಡಿ ಮುಂಭಾಗ ಮೆರವಣಿಗೆಯಲ್ಲಿ ದಣಿದವರಿಗೆ ಪಾನೀಯ ವಿತರಿಸಿದರು.