October 21, 2026

ವಿಟ್ಲ: ದೇವತಾ ಸಮಿತಿ 55ನೇ ವರ್ಷದ ಶಾರದಾ ಮಹೋತ್ಸವ ಸಮಾರೋಪ-ಆಕರ್ಷಕ ಶೋಭಾಯಾತ್ರೆ

0
image_editor_output_image-1040807084-1792582702286

ವಿಟ್ಲ: ವಿಟ್ಲ ದೇವತಾ ಸಮಿತಿ ವತಿಯಿಂದ 55ನೇ ವರ್ಷದ ಶ್ರೀ ಶಾರದ ಮಹೋತ್ಸವ ಸಮಾರೋಪ ಮತ್ತು ಶೋಭಾಯಾತ್ರೆ ನಡೆಯಿತು.

ಅಳಿಕೆ ಸತ್ಯಸಾಯಿ ಲೋಕಸೇವಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟಕೃಷ್ಣ ಶರ್ಮಾ ಬಿ ಮಾತನಾಡಿ ಅಧರ್ಮದ ಮಾರ್ಗದಲ್ಲಿ ಹೋಗಬಾರದು. ಆತ್ಮಹಿತಕ್ಕೆ ಪೂರ್ವಕವಾದ ಕಾರ್ಯ ಇಲ್ಲಿ ನಡೆಯುತ್ತಿದೆ. ಭಾರತೀಯ ಸಂಸ್ಕೃತಿಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡಾಗ ಸಾರ್ಥಕವಾಗುತ್ತದೆ ಎಂದರು.

ಸಮಾರೋಪ ಸಮಾರಂಭದಲ್ಲಿ
ವಿಟ್ಲ ದೇವತಾ ಸಮಿತಿ ಅಧ್ಯಕ್ಷ ನರ್ಸಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಂಜೆ ಶೋಭಾಯಾತ್ರೆ ನಡೆಯಿತು. ವಿಟ್ಲದ ಬೊಬ್ಬೆಕೇರಿ, ಮೇಗಿನಪೇಟೆ, ವಿಟ್ಲ ಪೇಟೆ, ಮೂಲಕ ತೆರಳಿದ ಭವ್ಯ ಶೋಭಾಯಾತ್ರೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ, ಪುಚ್ಚೆಗುತ್ತು ಫ್ರೆಂಡ್ಸ್, ಕೋಟಿಕೆರೆ ಫ್ರೆಂಡ್ಸ್ ಸರ್ಕಲ್, ಕಾಶೀಮಠ ಯುವಕ ಮಂಡಲ ವಿಟ್ಲ ಇವರಿಂದ ಕೇರಳದ ನೃತ್ಯರೂಪಕ, ನಾಸಿಕ್ ಬೇಂಡ್ ಸೆಟ್ , ಹುಲಿ ವೇಷ, ಮೊದಲಾದವುಗಳು ಒಳಗೊಂಡಿತ್ತು. ಆಕರ್ಷಕ ಸಿಡಿ ಮದ್ದು ಪ್ರದೇರ್ಶನ ನಡೆಯಿತು. ನಂತರ ವಿಗ್ರಹದ ವಿಸರ್ಜನೆ ನಡೆಯಿತು.

ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ದಾಸಪ್ಪ ಪೂಜಾರಿ, ವಿಟ್ಲ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ವೇತಾ ರವಿಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುದರ್ಶನ್ ಪಡಿಯಾರ್ ನಿರೂಪಿಸಿದರು.‌
ತುಳಸೀದಾಸ್ ಶೆಣೈ ಪ್ರಾರ್ಥಿಸಿದರು. ವಿಟ್ಲ ದೇವತಾ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ರಾಘವೇಂದ್ರ ಪೈ ವಂದಿಸಿದರು. ಗೋಕುಲ್ ದಾಸ್ ಶೆಣೈ ಸಹಕರಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!