October 16, 2026

ರಾಜ್ಯಾದ್ಯಂತ ಚುರುಕುಗೊಂಡ ಹಿಂಗಾರು ಮಳೆ: ಇಂದಿನಿಂದ ಮೂರ್ನಾಲ್ಕು ದಿನ ಮಳೆ

0
image_editor_output_image733958114-1792133349755

ಬೆಂಗಳೂರು: ರಾಜ್ಯಾದ್ಯಂತ ಹಿಂಗಾರು ಮಳೆ ಚುರುಕುಗೊಳ್ಳುತ್ತಿದ್ದು, ಇಂದಿನಿಂದ ಮೂರ್ನಾಲ್ಕು ದಿನ ಮಳೆ ಅಬ್ಬರಿಸಲಿದೆ.

ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ ಮೂರ್ನಾಲ್ಕು ದಿನ ರಾಜ್ಯದ ಹಲವೆಡೆ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಇಂದು ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ. ಅಲ್ಲಲ್ಲಿ ಗುಡುಗು-ಸಹಿತ ಮಳೆಯಾಗಲಿದೆ.


ಇನ್ನೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಒಂದೇ ದಿನ ಹೆಚ್ಚಿನ ಮಳೆ ಪ್ರಮಾಣ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದೇ ದಿನ 31.8 ಮಿ.ಮೀ. ಮಳೆ, ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ 5.8 ಮಿ.ಮೀ. ಮಳೆ, ಬೆಂಗಳೂರು ನಗರ AWS ಕೇಂದ್ರದಲ್ಲಿ 31 ಮಿ.ಮೀ. ಮಳೆ, ಬೆಂಗಳೂರು ಕೆಐಎಎಲ್‌ನಲ್ಲಿ 0.8 ಮಿ.ಮೀ. ಮಳೆ ದಾಖಲಾಗಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಗರಿಷ್ಠ 39 ಮಿ.ಮೀ. ಮಳೆ, ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ 11 ಮಿ.ಮೀ. ಮಳೆ, ಆಗುಂಬೆಯಲ್ಲಿ 12 ಮಿ.ಮೀ. ಮಳೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ 7.5 ಮಿ.ಮೀ. ಮಳೆ, ಬೆಂಗಳೂರಿನ ಜಿಕೆವಿಕೆ ಕೇಂದ್ರದಲ್ಲಿ 7.5 ಮಿ.ಮೀ ಮಳೆ, ಮೂಡಿಗೆರೆಯಲ್ಲಿ 7 ಮಿ.ಮೀ. ಮಳೆ ದಾಖಲು, ಮಂಗಳೂರಿನಲ್ಲಿ 2 ಮಿ.ಮೀ., ಮಂಗಳೂರು ಕೆವಿಕೆಯಲ್ಲಿ 3.5 ಮಿ.ಮೀ. ಮಳೆ, ಹಾಸನದಲ್ಲಿ 2.5 ಮಿ.ಮೀ. ಮಳೆ ದಾಖಲು, ಹಿರಿಯೂರಿನಲ್ಲಿ 1 ಮಿ.ಮೀ. ಮಳೆ, ಮೈಸೂರಿನ ಹುಣಸೂರಿನಲ್ಲಿ 0.5 ಮಿ.ಮೀ. ಮಳೆ, ಕೋಲಾರ ಜಿಲ್ಲೆಯ ತಮಾಕ ಕೆವಿಕೆ, ಹೆಸರಘಟ್ಟದಲ್ಲಿ ತಲಾ 0.5 ಮಿ.ಮೀ. ಮಳೆ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!