August 28, 2026

ನೇಪಾಳ ಪ್ರವಾಹ ದುರಂತದಲ್ಲಿ ಮೃತಪಟ್ಟ ಮಹಿಳೆಯ ಕಿವಿಯೋಲೆ ಕಳವು: ಇಬ್ಬರ ಬಂಧನ ವಿಡಿಯೋ ವೈರಲ್, ವ್ಯಾಪಕ ಆಕ್ರೋಶ

0
IMG-20260828-WA0004

ನೇಪಾಳ: ಭೀಕರ ಪ್ರವಾಹಕ್ಕೆ ಬಲಿಯಾದವರ ಮೃತದೇಹಗಳಿಂದ ಕಿವಿಯೋಲೆ ಕಳವು ಮಾಡುತ್ತಿರುವ ಇಬ್ಬರು ವ್ಯಕ್ತಿಗಳ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ನೇಪಾಲ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. 41 ಸೆಕೆಂಡ್‌ಗಳ ಈ ವಿಡಿಯೋದಲ್ಲಿ, ಭೀಕರ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ ಎಂದು ನಂಬಲಾಗಿರುವ ಮಹಿಳೆಯ ಮೃತದೇಹವನ್ನು ಕನಿಷ್ಠ ಇಬ್ಬರು ವ್ಯಕ್ತಿಗಳು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಮರದ ಹಲಗೆಗಳ ಸಹಾಯದಿಂದ ಹಾಗೂ ಮಹಿಳೆಯ ಕೂದಲು ಹಿಡಿದು ಮೃತದೇಹವನ್ನು ಎಳೆದೊಯ್ಯುವ ಅವರು, ಬಳಿಕ ಎರಡೂ ಕಿವಿಗಳಲ್ಲಿದ್ದ ಕಿವಿಯೋಲೆಗಳನ್ನು ತೆಗೆದು ಪಕ್ಕಕ್ಕೆ ಇಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ವೇಳೆ ಹಲವು ಪುರುಷರು ಮತ್ತು ಮಹಿಳೆಯರು ಸ್ಥಳದಲ್ಲಿ ನಿಂತಿರುವುದು ಕಂಡುಬಂದಿದ್ದು, ಕೆಲವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಘಟನೆಯನ್ನು ಚಿತ್ರೀಕರಿಸುತ್ತಿದ್ದರು. ಮೃತದೇಹದಿಂದ ಆಭರಣ ಕಳವು ಮಾಡಿದ ಘಟನೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದ ಸತ್ಯಾಸತ್ಯತೆ ಅಥವಾ ಮಹಿಳೆಯ ಸಾವಿನ ಸಂದರ್ಭಗಳನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಿಲ್ಲ. ಮೃತದೇಹದಿಂದ ಕಿವಿಯೋಲೆ ಕಳವು ಮಾಡಿದ ಆರೋಪಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನೇಪಾಳ ಪೊಲೀಸರು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದ ಒಂದು ಭಾಗವನ್ನೂ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!