ವಿಟ್ಲ : ಹೊರೈಝನ್ ಶಾಲೆ :.ಮೀಲಾದ್ ಕಾರ್ಯಕ್ರಮ
ವಿಟ್ಲ,: ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಮೀಲಾದ್ ಕಾರ್ಯಕ್ರಮವು ಶಾಲೆಯ ಅಧ್ಯಕ್ಷ ಅಝೀಝ್ ಸನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖತೀಬ್ ಆರಿಫ್ ಬಾಖವಿ ದುವಾ ನೆರವೇರಿಸಿದರು.
ಶಾಲೆಯ ಉಪಾಧ್ಯಕ್ಷ ವಿ.ಕೆ.ಎಂ.ಅಶ್ರಫ್,ಕಾರ್ಯದರ್ಶಿ ಅಬೂಬಕರ್ ನೋಟರಿ,ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆ ಮನೆ, ಟ್ರಸ್ಟಿ ಅಬ್ದುಲ್ ರಹಿಮಾನ್ ದೀಪಕ್, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು,ಮಸೀದಿ ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ,ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ,ಮದರಸ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಪರ್ತಿಪ್ಪಾಡಿ.ಮೀಲಾದ್ ಸಮಿತಿಯ ರಫೀಕ್ ಪೊನ್ನೋಟು, ನಮೀರ್ ಹಳೆ ಮನೆ, ಬಾತಿಷ್ ಮೇಗಿನಪೇಟೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರವಾದಿ ಕೀರ್ತನೆಗಳು ನಡೆದುವು.
ಸದರ್ ಉಮ್ಮರ್ ಸಅದಿ ಸ್ವಾಗತಿಸಿದರು.





