ಕನ್ಯಾನ: ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ಸಡಗರ ಸಂಭ್ರಮದ ಸ್ವಾತಂತ್ರ ದಿನಾಚರಣೆ
ಬ್ರಿಟಿಷ್ ಆಡಳಿತ ವಿರುದ್ಧ ಹೋರಾಡಿ ಜೀವ ತ್ಯಜಿಸಿ,ಆಸ್ತಿ ಪಾಸ್ತಿ ಗಳನ್ನು ತೊರೆದು, ನಾಶ ನಷ್ಟ್ರಗಳನ್ನು ಅನುಭವಿಸಿ ಲಕ್ಷೋಪ ಲಕ್ಷ ಸ್ವಾತಂತ್ರ್ಯ ಸೇನಾನಿಗಳು ವೀರ ಮೃತ್ಯುವನ್ನರಿಸಿ 1947ನೇ ಆಗಸ್ಟ್ 15ರಂದು ನಮಗೆ ಸಿಕ್ಕಿದ ಸ್ವತಂತ್ರ ಸುಂದರ ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕನ್ಯಾನ ಬಂಡಿತ್ತಡ್ಕ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ನಲ್ಲಿ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು
2026 ನೇ ಆಗಸ್ಟ್ 15 ಶನಿವಾರ ಬೆಳಿಗ್ಗೆ 10 ಗಂಟೆಗೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಕನ್ಯಾನ ರಹ್ಮಾನಿಯಾ ಜುಮಾ ಮಸೀದಿ ಪ್ರೆಸಿಡೆಂಟ್ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ ನೆರವೇರಿಸಿದರು, ಜಮಾಅತ್ ಪ್ರ. ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ, ಕನ್ಯಾನ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆಪಿ ಅಬ್ದುಲ್ ರಹಿಮಾನ್, ಕನ್ಯಾನ ರಹ್ಮಾನಿಯಾ ಜಮಾಅತ್ ಕಮಿಟಿ ಪದಾದಿಕಾರಿಗಳು ಹಾಗೂ ಸದಸ್ಯರುಗಳು ಮದರಸ ಅದ್ಯಾಪಕರು ಮತ್ತು ಇತರರು ಭಾಗವಹಿಸಿದರು. ಕನ್ಯಾನ ಜುಮಾ ಮಸೀದಿ ಸಹ ಮುದರ್ರಿಸ್ ಉಸ್ತಾದ್ ಅಬ್ದುಲ್ ಹಮೀದ್ ಸಖಾಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಅಲಿ ಬಿಕೆ ಸ್ವಾತಂತ್ರ್ಯ ಭಾಷಣ ಗೈದರು
ಶಾಲಾ ವಿದ್ಯಾರ್ಥಿಗಳ ವಂದನಾ ಸ್ವೀಕಾರ ಹಾಗೂ ವೈವಿಧ್ಯಮಯ ಮನೋರಂಜನಾ ಮತ್ತು ಆಟೋಟ ಕಾರ್ಯಕ್ರಮಗಳು ನಡೆಯಿತು
ಶಾಲಾ ಮುಖ್ಯೋ ಪಾಧ್ಯಾಯನಿ ಲವಿನಾ ಮೊಂತೇರೊ ದಿಕ್ಸೂಚಿ ಭಾಷಣಗೈದು ಸ್ವಾಗತಿಸಿದರು ಅಧ್ಯಾಪಿಕೆ ಮೇಲಿಸಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿ ಕೈರುನೀಸಾ ಮೇಡಂ ದನ್ಯವಾದಗೈದರು, ಮಕ್ಕಳಿಗೆ ಸಿಹಿ ತಿಂಡಿ ವಿಸ್ತರಿಸಲಾಯಿತು
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಶಸ್ವಿ ಗೊಳಿಸಿದ ಅಧ್ಯಾಪಿಕೆಯರನ್ನು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ವರನ್ನು ಶಾಲಾ ಅಭಿವೃದ್ಧಿ ಸಮಿತಿ ವತಿಯಿಂದ ವಂದಿಸಲಾಯಿತು.




