June 19, 2026

ಹುಟ್ಟುಹಬ್ಬವನ್ನು ಆಚರಿಸಲು ಸ್ನೇಹಿತರ ಜತೆ ಟ್ರೆಕ್ಕಿಂಗ್:  ಆಳವಾದ ಕಂದಕಕ್ಕೆ ಬಿದ್ದು ಯುವಕ ಸಾವು

0
image_editor_output_image1834868034-1781858289440.jpg

ಲಾನಾವಾಲಾ: ಮಹಾರಾಷ್ಟ್ರದ ಲೋನಾವಾಲಾದ ಪ್ರಸಿದ್ಧ ಲೋಹಗಢ ಕೋಟೆಯಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಸ್ನೇಹಿತರ ಜತೆ ಟ್ರೆಕ್ಕಿಂಗ್ಗೆ ಹೋಗಿದ್ದ ಯುವಕನೊಬ್ಬ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಗಾಹುಂಜೆಯ ಲೋಧಾ ಬೆಲ್ಮಂಡೋ ಸೊಸೈಟಿಯ ನಿವಾಸಿ ಕೇತನ್ ವಿಶಾಲ್ ಅಗರ್ವಾಲ್ (24) ಎಂದು ಗುರುತಿಸಲಾಗಿದೆ.

ಕೇತನ್ ಅಗರ್ವಾಲ್ ತನ್ನ ಜನ್ಮದಿನದ ಅಂಗವಾಗಿ ಸ್ನೇಹಿತರೊಂದಿಗೆ ಲೋಹಗಢ ಕೋಟೆಗೆ ಚಾರಣ ಕೈಗೊಂಡಿದ್ದ. ಆದರೆ, ಕೋಟೆಯ ಮೇಲ್ಭಾಗದಲ್ಲಿ ತೇವ ಹಾಗೂ ಜಾರು ಮೇಲ್ಮೈ ಇದ್ದ ಕಾರಣ, ಆತ ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಬಿದ್ದಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಕಂದಕವು ಅತ್ಯಂತ ಆಳ ಹಾಗೂ ಕಡಿದಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ತೀವ್ರ ಸವಾಲಿನಿಂದ ಕೂಡಿತ್ತು. ಆದರೂ ರಕ್ಷಣಾ ತಂಡದ ಸದಸ್ಯರು ಹಗ್ಗಗಳ ಸಹಾಯದಿಂದ ಕಂದಕಕ್ಕೆ ಇಳಿದು, ಸಾಗರ್ ಅವರ ಮೃತದೇಹವನ್ನು ಮೇಲಕ್ಕೆ ತಂದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ಕೋಟೆಗಳ ಮೇಲ್ಭಾಗದಲ್ಲಿ ಪಾಚಿ ಹಾಗೂ ಜಾರು ಇರುವುದರಿಂದ ಇಂತಹ ಚಾರಣದ ವೇಳೆ ಪ್ರವಾಸಿಗರು ತೀವ್ರ ಜಾಗರೂಕತೆ ವಹಿಸಬೇಕು ಮತ್ತು ಅಪಾಯಕಾರಿ ಅಂಚುಗಳಿಗೆ ಹೋಗಬಾರದು ಎಂದು ಸ್ಥಳೀಯ ಆಡಳಿತ ಮನವಿ ಮಾಡಿದೆ.

Leave a Reply

Your email address will not be published. Required fields are marked *

error: Content is protected !!