June 21, 2026

ಸುಳ್ಯ: ತುಂಡಾಗಿ ಬಿದ್ದ ಮನೆಯ ಮುಂಭಾಗದ ತೆಂಗಿನ ಮರ: ಕೂದಲೆಳೆ ಅಂತರದಲ್ಲಿ ವ್ಯಕ್ತಿ ಪಾರು

0
image_editor_output_image389415325-1781590076988.jpg

ಸುಳ್ಯ: ಪೈಚಾರು ಗ್ರಾಮದ ಶಾಫಿ ಪ್ರಗತಿ ಅವರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ತುಂಡಾಗಿ ಮನೆಯ ಅಂಗಳಕ್ಕೆ ಬಿದ್ದ ಪರಿಣಾಮ ಕೂದಲೆಳೆಯ ಅಂತರದಲ್ಲಿ ವ್ಯಕ್ತಿಯೊಬ್ಬರು ಅಪಾಯದಿಂದ ಪಾರಾದ ಘಟನೆ ಸೋಮವಾರ ನಡೆದಿದೆ.

ಶಾಫಿ ಪ್ರಗತಿ ಅವರ ಹಿರಿಯ ಸಹೋದರ ಹಸೈನಾರ್ ಅವರು ಮನೆಯ ಸ್ಲ್ಯಾಬ್ ಮೇಲಿನಿಂದ ಬೀಳುತ್ತಿದ್ದ ಮಳೆ ನೀರನ್ನು ಬಕೆಟ್‌ನಲ್ಲಿ ಸಂಗ್ರಹಿಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ಏಕಾಏಕಿ ತುಂಡಾಗಿ ಅಂಗಳಕ್ಕೆ ಬಿದ್ದಿದೆ.

ಮರ ಬೀಳುವುದನ್ನು ಗಮನಿಸಿದ ಹಸೈನಾರ್ ಅವರು ತಕ್ಷಣ ಸ್ಥಳದಿಂದ ದೂರ ಸರಿದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯ ಕೆಲವೇ ಕ್ಷಣಗಳ ಮೊದಲು ಇದೇ ಜಾಗದಲ್ಲಿ ಶಾಫಿ ಅವರ ತಾಯಿ ಇದ್ದರು ಎನ್ನಲಾಗಿದೆ. ತೆಂಗಿನ ಮರ ತುಂಡಾಗಿ ಬೀಳುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

error: Content is protected !!