ಎಸ್‌ಡಿಪಿಐ ಮೂರುಗೋಳಿ ಬ್ರಾಂಚ್ ಸಮಿತಿಯಿಂದ ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ
ಬೆಳ್ತಂಗಡಿ: ಎಸ್‌ಡಿಪಿಐ ಮೂರುಗೋಳಿ ಬ್ರಾಂಚ್ ಸಮಿತಿಯ ವತಿಯಿಂದ ಬಾರ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಕಡೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.



ಈ ಕಾರ್ಯಕ್ರಮವು ಗ್ರಾಮಸ್ಥರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು. ಗ್ರಾಮ ಬೀದಿಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಕುರಿತು ಮಾಹಿತಿಯನ್ನೂ ನೀಡಲಾಯಿತು.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಮೂರುಗೋಳಿ ಬ್ರಾಂಚ್ ಅಧ್ಯಕ್ಷರಾದ ಅಶ್ರಫ್ ಮೂರುಗೋಳಿ, ಹಾರಿಸ್ ಹನೀಫಿ ಕುಂಡಡ್ಕ, ಫೈಝಲ್ ಮೂರುಗೋಳಿ ಹಾಗೂ ಇತರ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಗ್ರಾಮದ ನೈರ್ಮಲ್ಯಕ್ಕಾಗಿ ಶ್ರಮಿಸಿದರು.




