May 31, 2026

ಮಂಗಳೂರು: ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ: ಬಾಲಕ ಸಾವು

0
image_editor_output_image816590785-1776233519317.jpg

ಮಂಗಳೂರು: ನಗರದ ಮಹಾಕಾಳಿಪಡ್ಡು ಬಳಿ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ವಿದ್ಯುತ್ ತಂತಿ ತಾಗಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ ಸಂಭವಿಸಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೂಲದ, ಪ್ರಸ್ತುತ ಮಹಾಕಾಳಿಪಡ್ಡುವಿನ ನಿರ್ಮಲ ನಗರದಲ್ಲಿ ವಾಸವಾಗಿರುವ ವರುಣ್ (15) ಮೃತಪಟ್ಟ ಯುವಕ.

ಮಹಾಕಾಳಿಪಡ್ಡು ಅಂಡರ್‌ಪಾಸ್‌ ಬಳಿಯ ಭಜನ ಮಂದಿರದ ಹತ್ತಿರ ವರುಣ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದನು. ಆಟದ ವೇಳೆ ಚೆಂಡು ಮಂದಿರದ ಛಾವಣಿಯ ಮೇಲೆ ಬಿದ್ದಿತ್ತು. ಚೆಂಡನ್ನು ಹೆಕ್ಕಲು ಛಾವಣಿ ಏರಿದಾಗ ಆಕಸ್ಮಿಕವಾಗಿ ಮೇಲಿದ್ದ ವಿದ್ಯುತ್‌ ತಂತಿ ವರುಣ್‌ಗೆ ತಾಗಿದೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

ವರುಣ್ ತಂದೆ ಕಣ್ಣನ ಗೌಡ ಅವರು ಕಳೆದ 25 ವರ್ಷಗಳಿಂದ ಮಂಗಳೂರಿನಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ವರುಣ್ ಇತ್ತೀಚೆಗಷ್ಟೇ ಎಸೆಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದನು. ರಜೆಯ ಸಂಭ್ರಮದಲ್ಲಿದ್ದ ಮಗ ವಿಧಿವಶನಾಗಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!