March 28, 2026

ಇರಾನ್ ನಿಂದ ಅಮೇರಿಕಾದ ವಿರುದ್ಧ ಪ್ರತಿಕಾರ ದಾಳಿ: ಮಿಲಿಟರಿ ನೆಲೆಗಳನ್ನು ತ್ಯಜಿಸಿದ ಅಮೇರಿಕಾ ಸೈನಿಕರು: 10 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳು ನಾಶ

0
image_editor_output_image81988760-1774693305929.jpg

ಟೆಹರಾನ್: ಇರಾನ್ ಯುದ್ಧದ ವೇಳೆ ಎರಡು ವರದಿಗಳು ಈಗ ಅಮೇರಿಕಾ ದೇಶವನ್ನು ಚಿಂತೆಗೀಡು ಮಾಡಿವೆ. ಹೌದು, ಈಗ ಇರಾನ್ ದೇಶವು ಇಸ್ರೇಲ್ ಮತ್ತು ಅಮೇರಿಕಾದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಅಮೆರಿಕಾದ ಸೈನಿಕರು ಭಯಭೀತರಾಗಿ ಮಿಲಿಟರಿ ನೆಲೆಗಳನ್ನು ತ್ಯಜಿಸಿ ಹೋಟೆಲ್‌ಗಳಲ್ಲಿ ಅಡಗಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಇರಾನಿನ ದಾಳಿಯಿಂದಾಗಿ ಸುಮಾರು 10 ಬಿಲಿಯನ್ ಯುಎಸ್ ಡಾಲರ್ (10 ಸಾವಿರ ಕೋಟಿ) ಮೌಲ್ಯದ ಶಸ್ತ್ರಾಸ್ತ್ರಗಳು ನಾಶವಾಗಿವೆ ಎನ್ನಲಾಗಿದೆ.

ಯುದ್ಧದ ಆರಂಭಕ್ಕೂ ಮುನ್ನ ಗಲ್ಪ್ ರಾಷ್ಟ್ರಗಳಲ್ಲಿನ ಅಮೇರಿಕನ್ ನೆಲೆಗಳಲ್ಲಿ 40,000 ಕ್ಕೂ ಹೆಚ್ಚು ಅಮೇರಿಕನ್ ಸೈನಿಕರು ಇದ್ದರು.ಆದಾಗ್ಯೂ, ಈ ಸೈನಿಕರಲ್ಲಿ ಹೆಚ್ಚಿನವರನ್ನು ಈಗ ಆ ಮಿಲಿಟರಿ ನೆಲೆಗಳಿಂದ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗಿದೆ.ಇರಾನ್‌ನ ಡ್ರೋನ್ ಮತ್ತು ಬ್ಯಾಲಿಸ್ಟಿಕ್ ದಾಳಿಗಳು ಯುಎಸ್‌ಗೆ ಭಾರೀ ಹಾನಿಯನ್ನುಂಟುಮಾಡಿದ್ದಲ್ಲದೆ, ಅದರ ಅನೇಕ ಮಾರಕ ಆಯುಧಗಳನ್ನು ನಾಶಪಡಿಸಿವೆ.

ಈ ಯುದ್ಧದಲ್ಲಿ ಇಲ್ಲಿಯವರೆಗೆ 12 ಅಮೇರಿಕನ್ MQ-9 ರೀಪರ್ ಡ್ರೋನ್‌ಗಳು, 7 KC-135 ಟ್ಯಾಂಕರ್ ವಿಮಾನಗಳು, 3 F-15 ಈಗಲ್ಸ್, 1 F-35 ಯುದ್ಧ ವಿಮಾನ, 1 F-18 ಯುದ್ಧ ವಿಮಾನ ಮತ್ತು ಒಂದು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಾಶವಾಗಿವೆ. ಇರಾನ್ ಯುದ್ಧದಲ್ಲಿ ನಾಶವಾದ ಅಮೇರಿಕನ್ ಶಸ್ತ್ರಾಸ್ತ್ರಗಳ ಮೌಲ್ಯ ಸುಮಾರು 10,000 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಗೂ ಮುನ್ನ ಇರಾನ್ ದೇಶವನ್ನು ಲಘುವಾಗಿ ಪರಿಗಣಿಸಿದ್ದೇ ಈಗ ಅವರಿಗೆ ದೊಡ್ಡ ಮುಳುವಾಗಿದೆ ಎನ್ನಲಾಗಿದೆ. ಮುಂಬರುವ ದಿನಗಳಲ್ಲಿ ಟ್ರಂಪ್ ಏಕಪಕ್ಷೀಯವಾಗಿ ಯುದ್ಧವನ್ನು ಕೊನೆಗೊಳಿಸದಿದ್ದರೆ, ಇರಾನ್ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಅಮೇರಿಕಾದ ಸೂಪರ್ ಪವರ್ ಖ್ಯಾತಿಗೆ ಭಾರೀ ಧಕ್ಕೆಯನ್ನುಂಟು ಮಾಡಲಿದೆ ಎನ್ನಲಾಗಿದೆ.

ಈಗ ಈ ಕುರಿತಾಗಿ ಮನವಿ ಮಾಡಿರುವ ಇರಾನ್ ದೇಶದ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ “ಗಲ್ಫ್ ರಾಷ್ಟ್ರಗಳಲ್ಲಿನ ಹೋಟೆಲ್ ಮಾಲೀಕರು ಅಮೆರಿಕದ ಸೈನಿಕರಿಗೆ ಕೊಠಡಿಗಳನ್ನು ಒದಗಿಸದಂತೆ ನಾನು ಮನವಿ ಮಾಡುತ್ತೇನೆ. ಒಂದು ವೇಳೆ ನೀವು ಅವರಿಗೆ ಆತಿಥ್ಯ ನೀಡಿದ್ದೆ ಆದಲ್ಲಿ ಅದಕ್ಕೆ ನೀವೇ ಸಂಪೂರ್ಣ ಜವಾಬ್ದಾರರಾಗುತ್ತೀರಿ’ಎಂದು ಎಚ್ಚರಿಸಿದ್ದಾರೆ.

ಈಗ ಅಮೇರಿಕಾದ ಸೈನಿಕರು ತಮ್ಮ ಮಿಲಿಟರಿ ನೆಲೆಗಳನ್ನು ತ್ಯಜಿಸಿ ಹೋಟೆಲ್ ಗಳಲ್ಲಿ ಅಡಗಿಕೊಂಡಿರುವ ವರದಿಗಳು ಬಂದಿರುವ ಬೆನ್ನಲ್ಲೇ ಇರಾನ್ ದೇಶವು ಈಗ ಹೋಟೆಲ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು 15 ಅಮೇರಿಕನ್ ಸೈನಿಕರು ಸಾವನ್ನಪ್ಪಿದ್ದು, ಸುಮಾರು 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಅಮೆರಿಕ ನೆಲೆಗಳನ್ನು ಹೊಂದಿರುವ ದೇಶಗಳ ಮೇಲೆ ಇರಾನ್ ದೇಶವು ತನ್ನ ದಾಳಿಯನ್ನು ತೀವ್ರಗೊಳಿಸಿದೆ ಅದರಲ್ಲೂ ಯುಎಇ ಮೇಲೆ ಅತಿ ಹೆಚ್ಚು ದಾಳಿ ನಡೆದಿದ್ದು, ನಂತರ ಕುವೈತ್, ಸೌದಿ ಅರೇಬಿಯಾ, ಕತಾರ್ ಮತ್ತು ಬಹ್ರೇನ್ ದೇಶಗಳ ಮೇಲೆಯೂ ಇರಾನ್ ದಾಳಿ ಮುಂದುವರೆಸಿದೆ ಎನ್ನಲಾಗಿದೆ. ಇರಾನ್ ದೇಶವು ಇದುವರೆಗೆ ಯುಎಇ ಮೇಲೆ ಕನಿಷ್ಠ 2,000 ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಕುವೈತ್ ಮೇಲೆ 1,200 ದಾಳಿಗಳು ನಡೆದಿವೆ. ಕತಾರ್ ಮೇಲೆ ಸುಮಾರು 400 ಡ್ರೋನ್ ಮತ್ತು ಕ್ಷಿಪಣಿ ದಾಳಿಗಳು ನಡೆದಿದೆ.

Leave a Reply

Your email address will not be published. Required fields are marked *

error: Content is protected !!