ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನಲ್ಲಿ “ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ:
ವಿಟ್ಲ: ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿಗಳಿಗೆ ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಡೇ ಕಾರ್ಯಕ್ರಮ ನಡೆಯಿತು.
ಎರಡು ವರ್ಷಗಳ ಪೂರ್ವ ಪ್ರಾಥಮಿಕ ಹಂತ ಪೂರ್ಣಗೊಳಿಸಿ 2026-27ನೇ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಗೆ ಕಾಲಿಡುತ್ತಿರುವ ಯು.ಕೆ.ಜಿ. ಮಕ್ಕಳಿಗೆ ಜನಪ್ರಿಯ ಸೆಂಟ್ರಲ್ ಶಾಲೆಯಲ್ಲಿ ಅಭಿನಂದಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ವಿದ್ಯಾಲಯಗಳಲ್ಲಿ ನಡೆಸುವ ಘಟಿಕೋತ್ಸವ ಮಾದರಿಯಲ್ಲಿ ಮಕ್ಕಳಿಗೆ ಪದವಿ ಪ್ರಧಾನದ ಮೇಲಂಗಿ ಮತ್ತು ಟೋಪಿ ಧರಿಸಲಾಗಿತ್ತು ಹಾಗೆಯೇ ಪೂರ್ವ ಪ್ರಾಥಮಿಕ ಹಂತ ಪೂರ್ಣಗೊಳಿಸಿದ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್.ಕೆ.ಜಿ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಜನಪ್ರಿಯ ಆಸ್ಪತ್ರೆಯ ಸಿಇಓ ಡಾ.ಕಿರಾಶ್ ಪರ್ತಿಪಾಡಿಯವರು ಮಾತನಾಡಿ ಮಕ್ಕಳಿಗೆ ಅವರ ಜನ್ಮದಿನದಂದು ಒಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಅವರನ್ನು ಮೊಬೈಲ್ ನಿಂದ ದೂರ ಇಡುವಂತೆ ಹೇಳಿ ಗ್ರಾಜುವೇಶನ್ ಪಡೆದ ಮಕ್ಕಳಿಗೆ ಶುಭ ಹಾರೈಸಿದರು.
ಇನ್ನೋರ್ವ ಅಥಿತಿಯಾಗಿ ಆಗಮಿಸಿದ್ದ ಜನಪ್ರಿಯ ಹಾಸ್ಪಿಟಲ್ ಮಂಗಳೂರು ಇಲ್ಲಿನ ಮೂಳೆ ಮತ್ತು ಕೀಳು ತಜ್ಞ ಡಾ. ಮೇಘಶ್ಯಾಮ್ ರವರು ಮಾತನಾಡಿ ಕಿಂಡರ್ ಗಾರ್ಡನ್ ಗ್ರಾಜುಯೇಷನ್ ಪ್ರಮಾಣ ಪತ್ರ ಸ್ವೀಕರಿಸಿದ ಜನಪ್ರಿಯ ಶಾಲೆಯ ಮಕ್ಕಳು ಮುಂದೆ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕರಾದ ನೌಶೀನ್ ಬದ್ರಿಯಾ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪದವಿ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.
ಶಾಲೆಯ ಪ್ರಾಂಶುಪಾಲರಾದ ಲಿಬಿನ್ ಕ್ಸೇವಿಯರ್ ಮತ್ತು ಆಡಳಿತ ಅಧಿಕಾರಿ ಸಫ್ವಾನ್ ಪಿಲಿಕಲ್ ಸಂಧರ್ಬೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದುದ್ದಕ್ಕೂ ಎಲ್. ಕೆ.ಜಿ. ಮಕ್ಕಳೇ ತಮ್ಮ ಮುದ್ದಾದ ತೊದಲು ನುಡಿಗಳೊಂದಿಗೆ ಸ್ವಾಗತ ನಿರೂಪಣೆ ಧನ್ಯವಾದವನ್ನು ಅಚ್ಚುಕಟ್ಟಿನಿಂದ ಮಾಡಿ ಪೋಷಕರ ಗಮನ ಸೆಳೆದರು.




