ಬಂಟ್ವಾಳ: ನಿಂತಿದ್ದ ಪಿಕಪ್ ವಾಹನಕ್ಕೆ ಬೈಕ್ ಢಿಕ್ಕಿ: ಬೈಕ್ ಸವಾರ, ನರಿಕೊಂಬು ನಿವಾಸಿ ಮೃತ್ಯು
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿದ ಘಟನೆ ಇಂದು(ಫೆ.23) ಬೆಳಿಗ್ಗೆ ಬಂಟ್ವಾಳದ ಬ್ರಹ್ಮರಕೋಟ್ಟು ಎಂಬಲ್ಲಿ ನಡೆದಿದೆ.
ನರಿಕೊಂಬು ಮರ್ದೊಳಿ ನಿವಾಸಿ, ಸಂತೋಷ್ ಮೃತಪಟ್ಟ ಬೈಕ್ ಸವಾರ.
ಸಂತೋಷ್ ಬೆಳಿಗ್ಗೆ ಮನೆಯಿಂದ ಮಂಗಳೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಬ್ರಹ್ಮರಕೋಟ್ಟು ಎಂಬಲ್ಲಿ ಟಯರ್ ಬ್ಲಾಸ್ಟ್ ಆಗಿದ್ದ ಕಾರಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಪಿಕಪ್ ವಾಹನಕ್ಕೆ ಡಿಕ್ಕಿಯಾಗಿದೆ.




