ಸುರಕ್ಷಾ ಹೆಲ್ತ್ ಸೆಂಟರ್ ವಿಟ್ಲಕ್ಕೆ 25 ರ ಸಂಭ್ರಮ: ಡಿ.28 ಭಾನುವಾರ ಸಿಲ್ವರ್ ಜ್ಯುಬಿಲಿ ಆಚರಣೆ
ವಿಟ್ಲ: ಡಾ. ಗೀತಪ್ರಕಾಶ್ ಮತ್ತು ಡಾ. ಗಾಯತ್ರಿ ಜಿ ಪ್ರಕಾಶ್ ದಂಪತಿಗಳು 2000 ಡಿಸೆಂಬರ್ 28 ರಂದು ವಿಟ್ಲದಲ್ಲಿ ಪ್ರಾರಂಭಿಸಿದ ಸುರಕ್ಷಾ ಹೆಲ್ತ್ ಸೆಂಟರ್ ಗ್ರಾಮೀಣ ಪ್ರದೇಶದ ಫಲಾನುಭವಿಗಳನ್ನು ಕೇಂದ್ರೀಕರಿಸಿ ಕುಟುಂಬ ವೈದ್ಯಪದ್ದತಿಯನ್ನು ಆಧಾರವಾಗಿಟ್ಟುಕೊಂಡು 25 ವರುಷದ ಸುದೀಘ೯ ಸೇವೆಯನ್ನು ಕೊಡುತ್ತಾ ಬಂದಿದ್ದಾರೆ. ಹೆರಿಗೆ ಮತ್ತು ಸ್ತೃೀರೋಗ ತಜ್ಞರಾದ ಡಾ. ಗೀತಪ್ರಕಾಶ್ ಸುಮಾರು 7000ಕ್ಕಿಂತಲೂ ಅಧಿಕ ಹೆರಿಗೆಗಳನ್ನು ಮಾಡಿ ಜನಾನುರಾಗಿ ವೈದ್ಯರಾಗಿದ್ದಾರೆ.
ಲಯನ್ಸ್ ನ ಜಿಲ್ಲಾ ಗವನ೯ರಾಗಿ ಕಾಯ೯ನಿವ೯ಹಿಸಿ ಸಮಾಜಸೇವೆಯಲ್ಲೂ ತನ್ನ ಛಾಪನ್ನು ಮೂಡಿಸಿದ್ದಾರೆ.ಡಾ. ಗಾಯತ್ರಿಯವರೂ ವೈದ್ಯ ಶಾಸ್ತೃದಲ್ಲಿ ತರಬೇತಿ ಹೊಂದಿ 25 ವರುಷಗಳಿಂದ ಸೇವೆಯನ್ನು ನೀಡುತ್ತಿದ್ದಾರೆ. ಹುಟ್ಟೂರಿನಲ್ಲೆ ಆರೋಗ್ಯ ಸೇವೆಯನ್ನು ಆರಂಭಿಸಿ ತಾಯಿಮಕ್ಕಳ ಆರೋಗ್ಯ ಸಂರಕ್ಷಣೆಯನ್ನು ಕಾಪಾಡುವ ಅವಕಾಶ ನೀಡಿದ ಜನತೆಯನ್ನು ಈ ಸಂದಭ೯ದಲ್ಲಿ ವಿಶೇಷವಾಗಿ ಸ್ಮರಿಸಿಕೊಳ್ಳುತ್ತಾ ಮುಂದಿನ ದಿನಗಳಲ್ಲೂ ಹೆಚ್ಚಿನ ಸಹಕಾರಕ್ಕಾಗಿ ವೈದ್ಯ ದಂಪತಿಗಳು ವಿನಂತಿಸಿಕೊಂಡಿರುತ್ತಾರೆ. ಇದರ ಪ್ರಯುಕ್ತ ಜೋಗಿಮಠ ಸಮೀಪದ ಅಂಗರಕೋಡಿ ಸಾನಿಧ್ಯ ಮನೆಯಲ್ಲಿ ಸಂಜೆ 7 ಗಂಟೆಗೆ ಸಮಾರಂಭ ನಡೆಯಲಿದೆ.




