March 18, 2026

ಬಜಪೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

0
image_editor_output_image-575835032-1766560988421.jpg

ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮೂಲಕ ಬಹುಮತ ಪಡೆದಿದೆ.

ಬಜಪೆ ಪಟ್ಟಣ ಪಂಚಾಯತಿನ ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ. ಬುಧವಾರ ಮಂಗಳೂರು ಮಿನಿ ವಿಧಾನಸೌಧದಲ್ಲಿ ಮತಗಳ ಎಣಿಕೆ ನಡಯಿತು.

ಚುನಾವಣೆ ವಿಜೇತರ ವಿವರ: ವಾರ್ಡ್ 1ರಲ್ಲಿ ಯಶೋಧ (ಬಿಜೆಪಿ), ವಾರ್ಡ್ 2ರಲ್ಲಿ ಪದ್ಮನಾಭ ಪೂಜಾರಿ (ಬಿಜೆಪಿ), ವಾರ್ಡ್ 3- ಜಾಕೋಬ್ ಪಿರೇರಾ (ಕಾಂಗ್ರೆಸ್ ), ವಾರ್ಡ್ 4 – ಸಿರಾಜ್ ಬಜಪೆ (ಪಕ್ಷೇತರ ), ವಾರ್ಡ್ 5- ಗುಲ್ಸನ್ ಕರೀಂ (ಎಸ್ ಡಿಪಿಐ ), ವಾರ್ಡ್ 6 – ವೀಣಾ ಡಿಸೋಜಾ (ಎಸ್ಡಿಪಿಐ ), ವಾರ್ಡ್ 7- ಆಯಿಷಾ ಬಜಪೆ (ಎಸ್ಡಿಪಿಐ ), ವಾರ್ಡ್ 8- ಲೋಕೇಶ್ ಪೂಜಾರಿ (ಬಿಜೆಪಿ), ವಾರ್ಡ್ 9 – ರಿತೇಶ್ ಶೆಟ್ಟಿ (ಬಿಜೆಪಿ), ವಾರ್ಡ್ 10 – ಶರ್ಮಿಳಾ ಶೆಟ್ಟಿ (ಬಿಜೆಪಿ ), ವಾರ್ಡ್ 11- ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ ), ವಾರ್ಡ್ 12 – ಕಿರಣ್ (ಕಾಂಗ್ರೆಸ್), ವಾರ್ಡ್ 13 – ಸುಪ್ರೀತಾ ಶೆಟ್ಟಿ (ಬಿಜೆಪಿ), ವಾರ್ಡ್ 14- ಹಾಜಿರಾ ಫರ್ಜಾನಾ (ಕಾಂಗ್ರೆಸ್ ), ವಾರ್ಡ್ 15 – ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ ), ವಾರ್ಡ್ 16 – ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ ), ವಾರ್ಡ್ 17 – ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ), ವಾರ್ಡ್ 18- ರಕ್ಷಿತಾ ಶರತ್ (ಬಿಜೆಪಿ), ವಾರ್ಡ್ 19- ಜಯಂತ್ ಪೂಜಾರಿ (ಬಿಜೆಪಿ ) ಜಯ ಸಾಧಿಸಿದ್ದಾರೆ.

ಡಿ.21ರಂದು ಬಜಪೆ ಪಟ್ಟಣ ಪಂಚಾಯತಿಗೆ ಚುನಾವಣೆ ನಡೆದಿತ್ತು.

Leave a Reply

Your email address will not be published. Required fields are marked *

error: Content is protected !!