ವಿಟ್ಲ: ಬಾಂಗ್ಲಾ ಪ್ರಜೆಯ ಪಾಸ್ ಪೋರ್ಟ್ ಪ್ರಕರಣ: ಪಾಸ್ ಪೋರ್ಟ್ ಕಿಂಗ್ ಪಿನ್ ಪ್ರಮುಖ ಆರೋಪಿ ಶಕ್ತಿದಾಸ್ ಬಂಧನ; ಪೊಲೀಸ್ ಸಿಬ್ಬಂದಿ ಸಸ್ಪೆಂಡ್
ವಿಟ್ಲ: ಪಾಸ್ ಪೋರ್ಟ್ ಮಾಡಿಕೊಡಲು ಸಹಾಯ ಮಾಡಿದ ಆರೋಪದ ಮೇಲೆ ವಿಟ್ಲ ಪೋಲೀಸ್ ಠಾಣೆಯ ಸಿಬ್ಬಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಪಾಸ್ ಪೋರ್ಟ್ ಕಿಂಗ್ ಪಿನ್ ಪ್ರಮುಖ ಆರೋಪಿ ಶಕ್ತಿದಾಸ್ ಎಂಬಾತನನ್ನು ಬಂಧಿಸಿದ್ದಾರೆ.
ಪಾಸ್‌ಪೋರ್ಟ್ ಮಾಡಲು ಸಹಾಯ ಮಾಡಿದ ಪೋಲೀಸ್ ಕಾನ್ಸ್ಟೇಬಲ್ ಪ್ರದೀಪ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಿ ಸಸ್ಪೆಂಡ್ ಮಾಡಲಾಗಿದೆ.
ಶಂಕಿತ ಬಾಂಗ್ಲಾ ಪ್ರಜೆ ಶಕ್ತಿದಾಸ್ ಎಂಬಾತನಿಗೆ ಪಾಸ್ ಪೋರ್ಟ್ ಪಡೆಯಲು ಸಹಾಯ ಆರೋಪ ಇವರ ಮೇಲಿದೆ. ಅದೇ ವಿಟ್ಲ ಠಾಣೆಯ ಕಾನ್ಸ್ಟೇಬಲ್ ಸಾಬೀ ಮಿರ್ಜಿ ನೀಡಿದ ದೂರಿನ ಆದಾರದ ಮೇಲೆ ಕಾನ್ಸ್ಟೇಬಲ್ ಪ್ರದೀಪ್ ನನ್ನು ಅರೆಸ್ಟ್ ಮಾಡಲಾಗಿದೆ.
ಈ ಹಿಂದೆ ಶಕ್ತಿದಾಸ್ ಪಾಸ್ ಪೋರ್ಟ್ ಅರ್ಜಿಯನ್ನು ಸಾಬೀ ಮಿರ್ಜಿ ತಿರಸ್ಕರಿಸಿದ್ದರು. ಆದರೆ ಇತ್ತೀಚೆಗೆ ಸಾಬೀ ಮಿರ್ಜಿ ಕರ್ತವ್ಯ ನಿಮಿತ್ತ ಬೇರೆ ಕಡೆಗೆ ಹೋದಾಗ ಕಾನ್ಸ್ಟೇಬಲ್ ಪ್ರದೀಪ್ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಆರೋಪಿ ಕಾನ್ಸ್ಟೇಬಲ್ ಪ್ರದೀಪ್ ಅರೆಸ್ಟ್ ಆಗಿ ನ್ಯಾಯಾಂಗ ಬಂದನದಲ್ಲಿದ್ದಾರೆ.




