March 19, 2026

ಕೊಳಲು ನುಡಿಸುತ್ತಾ ಬ್ಯಾಕ್ ಸ್ಟೋರ್ಕ್ನಲ್ಲಿ ಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಮಂಗಳೂರಿನ ಯುವಕ

0
image_editor_output_image-118292312-1761804857710.jpg

ಮಂಗಳೂರು: ಖ್ಯಾತ ಸಂಗೀತಗಾರ ಮತ್ತು ಬಹುವಾದ್ಯ ವಾದಕ ರೂಬನ್ ಜೇಸನ್ ಮಚಾದೊ ಅವರು ಕೊಳಲು ನುಡಿಸುತ್ತಾ ಅತಿ ದೂರ ಬ್ಯಾಕ್ ಸ್ಟೋರ್ಕ್ ನಲ್ಲಿಈಜಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ್ದಾರೆ.

ಮಂಗಳೂರಿನ ಬಹುಮುಖ ಪ್ರತಿಭೆ ಸಂಗೀತಗಾರ ರುಬೆನ್ ಜೇಸನ್ ಮಚದೋ, ಸಂತ ಅಲೋಯ್ಸಿಯಸ್ ಕಾಲೇಜು ಸ್ವಿಮ್ಮಿಂಗ್ ಪೂಲ್ನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಕೊಳಲು ನುಡಿಸುತ್ತಾ ಬೆನ್ನು ಹಿಂದೆ ಹಾಕಿ 700 ಮೀಟರ್ಗೂ ಹೆಚ್ಚು ದೂರ ಈಜಿ ವಿಶ್ವದ ಮೊದಲ ದಾಖಲೆಯನ್ನು ಸೃಷ್ಟಿಸಿದ್ದಾರೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಈ ಸಾಧನೆಯನ್ನು ಗುರುತಿಸಿ, ಅಧಿಕೃತ ಪ್ರಮಾಣಪತ್ರವನ್ನು ನೀಡಿದ್ದು, ವಿಡಿಯೋ ಪರಿಶೀಲನೆಯ ನಂತರ ನಿಖರ ದೂರವನ್ನು ಘೋಷಿಸುವುದಾಗಿ ತಿಳಿಸಿದೆ.

ಈ ವಿಭಾಗದಲ್ಲಿ ಇದು ಮೊದಲ ಸಾಧನೆಯಾಗಿದ್ದು, ಈ ಮೊದಲು ಯಾರೂ ಕೂಡ ಈ ರೀತಿಯ ಪ್ರಯತ್ನ ಮಾಡಿಲ್ಲ. ಪೂಲ್ನ ಕಾರ್ನರ್ ಸುತ್ತಲೂ ಈಜಿದರೆ 150 ಮೀಟರ್ ಎಂದು ಗಣನೆ ಮಾಡಲಾಗುತ್ತದೆ. ರುಬೆನ್ ಅವರು 5 ಸುತ್ತು ಮತ್ತು 75 ಮೀಟರ್ಗಳನ್ನು ಪೂರ್ಣಗೊಳಿಸಿದ್ದು, ನಿಖರ ಗಣನೆಯ ಪ್ರಕಾರ 700 ಮೀಟರ್ಗೂ ಹೆಚ್ಚು ದೂರ ಈಜಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆ ಅಧಿಕಾರಿಗಳ ಪ್ರಕಾರ, ಇಂತಹ ಯಾವುದೇ ಸಾಧನೆ ಯಾವ ವಿಶ್ವ ದಾಖಲೆ ಸಂಗ್ರಹದಲ್ಲೂದಾಖಲಿಸಲಾಗಿಲ್ಲ, ಇದು ಜಾಗತಿಕವಾಗಿ ಪ್ರಥಮವಾಗಿದೆ. ಸೈಂಟ್ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಮಾಜಿ ಪತ್ರಿಕೋದ್ಯಮ ಉಪನ್ಯಾಸಕ ರೂಬೆನ್ ಜೇಸನ್ ಮಚಾದೊ, ಸಂಗೀತಕ್ಕೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ಮೊದಲು 2 ವರ್ಷಗಳ ಕಾಲ ಸಂಸ್ಥೆಯಲ್ಲಿಸೇವೆ ಸಲ್ಲಿಸಿದ್ದರು. ಇಂದು ಬಾಲಿವುಡ್ , ಸ್ಯಾಂಡಲ್ ವುಡ್ ಮತ್ತು ಕೋಸ್ಟಲ್ ವುಡ್ ಚಲನಚಿತ್ರೋದ್ಯಮಗಳಿಗೆ ಪ್ರದರ್ಶನ ನೀಡುವ ವೃತ್ತಿಪರ ಸಂಗೀತಗಾರರಾಗಿದ್ದಾರೆ ಹಾಗೂ ಭಾರತದಾದ್ಯಂತ ಪ್ರಮುಖ ಕಾರ್ಯಕ್ರಮಗಳಲ್ಲಿತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಮಂಗಳೂರಿನಲ್ಲಿ ವಾಸಿಸುತ್ತಿರುವ 29 ವರ್ಷದ ರುಬೆನ್ ಜೇಸನ್ ಮಚದೋ ಅವರು ಸಂಗೀತಗಾರ ಹಾಗೂ ಸಂಗೀತ ಶಿಕ್ಷಕರಾಗಿ ಖ್ಯಾತರಾಗಿದ್ದಾರೆ. ಹಿಂದೂಸ್ತಾನಿ ಕೊಳಲು (ಫ್ಲೂಟ್) ಮತ್ತು ವೆಸ್ಟರ್ನ್ ಫ್ಲೂಟ್ನಲ್ಲಿ ಪರಿಣತರಾಗಿರುವ ಅವರು, ಸ್ಯಾಕ್ಸೋಫೋನ್, ಗಿಟಾರ್ ಮತ್ತು ಇತರ ವಾದ್ಯಗಳನ್ನೂ ನುಡಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!