ಪುತ್ತೂರು: 55 ವರ್ಷಗಳಿಂದ ನಾಪತ್ತೆಯಾಗಿದ್ದ ವಾರೆಂಟ್ ಆರೋಪಿಯ ಬಂಧನ
ಪುತ್ತೂರು: ಸುಮಾರು 55 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಅತ್ಯಂತ ಹಳೆಯ ಪ್ರಕರಣ ಇದಾಗಿದೆ. ಈಗ ಅರೆಸ್ಟ್ ಆಗಿರುವ ಆರೋಪಿಗೆ ವಯಸ್ಸು 78.
1970ರಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ Cr NO 32/1970 u/s 154,155 (2)MF Rules 1969 sec 86 of MF Act ( LPC :2/1972) ಕ್ಕೆ ಸಂಬಂಧಿಸಿದಂತೆ LPC ವಾರಂಟ್ ಆಸಾಮಿ ಯಾಗಿರುವ CR.ಚಂದ್ರನ್ ಪ್ರಾಯ 78 ವರ್ಷ ಮಲಪುರಂಜಿಲ್ಲೆ ಕೇರಳ ರಾಜ್ಯ ಎಂಬಾತ.
ಕಳೆದ 55ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ, ಇದೀಗ ಆರೋಪಿಯನ್ನು ಕೇರಳ ರಾಜ್ಯದ ಕ್ಯಾಲಿಕಟ್ ನ ಪುಲ್ಲಿಕಲ್ ಎಂಬಲ್ಲಿ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣವಾಗಿದೆ




