ಬಂದಡ್ಕ: 10ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಕಾಸರಗೋಡು: 10ನೇ ತರಗತಿ ಓದುತ್ತಿರುವ ವಿಧ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಕುಂಡಂಗುಳಿ ಸರಕಾರಿ ಹೈಯರ್ ಸೆಕಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ದೇವಕಿ (16) ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಂದಡ್ಕ ಗ್ರಾಮೀಣ ಬ್ಯಾಂಕಿನ ಬಳಿಯಲ್ಲಿ ಗಂಜಿ ಕ್ಯಾಂಟೀನ್ ನಡೆಸುವ ಸಾವಿತ್ರಿ ಅವರ ಪುತ್ರಿಯಾಗಿರುವ ದೇವಕಿಯು ಬಾಲಸಂಘದ ಬಂದಡ್ಕ ಗ್ರಾಮೀಣ ಘಟಕದ ಅಧ್ಯಕ್ಷೆಯಾಗಿದ್ದು ಕ್ರಿಯಾಶೀಲ ಹುಡುಗಿ ಎನಿಸಿದ್ದರು. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.




