February 1, 2026

ವಿಟ್ಲ: ಹೊರೈಝನ್ ಪಬ್ಲಿಕ್ ಸ್ಕೂಲ್ ನಲ್ಲಿ 17ರ ವಯೋಮಾನದ ಥ್ರೋ ಬಾಲ್ ಪಂದ್ಯಾಟ

0
image_editor_output_image-1883582825-1755875090431

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ ಇದರ ಸಹಯೋಗದಲ್ಲಿ 17 ರ ವಯೋಮಾನದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ ಹೊರೈಝನ್ ಪಬ್ಲಿಕ್ ಸ್ಕೂಲ್ ವಿಟ್ಲ ಇಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭವು ಶಾಲಾ ಅಧ್ಯಕ್ಷರಾದ ಅಝೀಝ್ ಹಳೆಮನೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉಪಾಧ್ಯಕ್ಷರಾದ ವಿ.ಕೆ.ಯಂ ಆಶ್ರಫ್, ಪ್ರ. ಕಾರ್ಯದರ್ಶಿ ಅಬೂಬಕರ್ ನೋಟರಿ ವಿಟ್ಲ, ಜೊ. ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಟ್ರಸ್ಟಿಗಳಾದ ಅಬ್ದುಲ್ ಹಮೀದ್ ಬದ್ರಿಯಾ, ಝುಬೈರ್ ಮಾಸ್ಟರ್, ಇಸಾಕ್ ಹಾಜಿ, ವಿಟ್ಲ ಕೇಂದ್ರ ಜುಮಾ ಮಸೀದಿಯ ಪ್ರ. ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ ಉಪಸ್ಥಿತರಿದ್ದರು.

ವಿಟ್ಲ ವಲಯ ದೈಹಿಕ ಶಿಕ್ಷಣ ನೋಡಲ್ ಶಿಕ್ಷಕರಾಗಿರುವ ಶ್ರೀ ಸುರೇಶ್ ರವರು ಪ್ರಸ್ತಾವನೆಗೈದರು. ಮುಖ್ಯೋಪಾಧ್ಯಾಯರಾದ ಮನಾಝಿರ್ ಮುಡಿಪು ಸ್ವಾಗತಿಸಿದರು. ಶಿಕ್ಷಕಿಯರಾದ ಗಾಯತ್ರಿ, ಸಮೀಯ ನಿರೂಪಿಸಿದರು. ವಿಟ್ಲ ವಲಯದ ವಿವಿಧ ಪ್ರೌಢ ಶಾಲೆಗಳಿಂದ ಸುಮಾರು 25 ತಂಡಗಳು ಭಾಗವಹಿಸಿದ್ದು, ಪಂದ್ಯಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!