ಸುಳ್ಯ: ವಿಷದ ಹಾವು ಕಡಿದು ಮಹಿಳೆ ಮೃತಪಟ್ಟ ಘಟನೆ ಸುಳ್ಯದ ಅಲೆಟ್ಟಿ ಗ್ರಾಮದಲ್ಲಿ ನಡೆದಿದೆ.
ಕುಡೆಂಬಿಯ ರಾಧಮ್ಮ (53) ಮೃತ ಮಹಿಳೆ. ತೋಟದಲ್ಲಿ ಹುಲ್ಲು ಹರೆಯುತ್ತಿದ್ದಾಗ ಹಾವು ಕಡಿದಿತ್ತು. ಬಳಿಕ ಅವರನ್ನು ಸ್ಥಳೀಯರು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗೆ ರಾಧಮ್ಮ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.