September 22, 2026

ಬೆಳ್ತಂಗಡಿ: ವಿವಾಹಿತ ಮಹಿಳೆ ನಿಗೂಢ ಸಾವು

0
image_editor_output_image1548058883-1753776690697.jpg

ಬೆಳ್ತಂಗಡಿ: ವಿವಾಹಿತ ಮಹಿಳೆಯೊಬ್ಬರು ನಿಗೂಢ ಆಗಿ ಮೃತಪಟ್ಟ ಘಟನೆ ಮರೋಡಿಯಲ್ಲಿ ಸೋಮವಾರ ನಡೆದಿದೆ.

ಮರೋಡಿ ಗ್ರಾಮದ ಮೂಕಾಂಬಿಕಾ ನಿಲಯ ಪಚ್ಚಡಿ ಮನೆಯ ವಾಣಿಶ್ರೀ (26 ವ) ಮೃತಪಟ್ಟ ವಿವಾಹಿತೆ.

 

ವಾಣಿಶ್ರೀ ಅವರಿಗೆ ಕಳೆದೊಂದು ವರ್ಷದ ಹಿಂದೆ ಮದುವೆಯಾಗಿದ್ದು, ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎನ್ನಲಾಗಿದೆ. ವಿಪರೀತ ಹೊಟ್ಟೆನೋವೆಂದು ಹೇಳಿದಾಗ ಪಕ್ಕದ ಮನೆಗೆ ತೆರಳಿದ್ದ ಅವರ ದೊಡ್ಡಮ್ಮರವರಿಗೆ ಅನುಮಾನ ಬಂದು ತಕ್ಷಣ ಅವರ ಪತಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ.

ಘಟನಾ ಸ್ಥಳಕ್ಕೆ ವೇಣೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!