ಬೆಳಗಾವಿಯಲ್ಲಿ ತಲವಾರು ಪ್ರದರ್ಶನ ಮಾಡುತ್ತಾ ಮೆರವಣಿಗೆ:
ಬಜರಂಗದಳದ ವಿರುದ್ಧ ದೂರು
ಬೆಳಗಾವಿ: ಬಜರಂಗದಳದ ಸದಸ್ಯರು ತಲವಾರ್ ಪ್ರದರ್ಶನ ಮಾಡುತ್ತಾ ನವರಾತ್ರಿ ಮೆರವಣಿಗೆ ನಡೆಸಿದ್ದು ಕಾನೂನು ಬಾಹಿರ ಕೃತ್ಯವಾಗಿದೆ ಎಂದು ಆರೋಪಿಸಿಸಿರುವ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್ಸ್ ಸಂಘಟನೆಯು ಬಜರಂಗದಳದ ವಿರುದ್ಧ ಡಿಜಿಪಿಯವರಿಗೆ ದೂರು ಸಲ್ಲಿಸಿದೆ.
ಇಂತಹ ಘಟನೆಗಳಿಂದ ರಾಜ್ಯದಲ್ಲಿ ಮತೀಯ ಗೂಂಡಾಗಿರಿ ಘಟನೆಗಳು ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಮೆರವಣಿಗೆಯಲ್ಲಿ ತಲವಾರ್ ಪ್ರದರ್ಶಿಸಿದ ಬಜರಂಗದಳದ ಸದಸ್ಯರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.




