March 4, 2026

ಮಂಗಳೂರು: ಸೈಬರ್ ವಂಚನೆಗಾಗಿ ಬಡವರ ಬ್ಯಾಂಕ್ ಖಾತೆ ಬಳಕೆ: ಇಬ್ಬರು ಆರೋಪಿಗಳ ಬಂಧನ

0
image_editor_output_image1685581883-1742858689279.jpg

ಮಂಗಳೂರು: ಸೈಬರ್ ವಂಚನೆಗಾಗಿ ಬಡವರ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ತಹಸೀಲ್ದಾರ್‌ ಗಲ್ಲಿಯ ಅವಿನಾಶ್‌ ಸುತಾರ್ (‌28), ರಾಮದೇವ ಗಲ್ಲಿಯ ಅನೂಪ್‌ ಕಾರೇಕರ್‌ (42)ಬಂಧಿತ ಆರೋಪಿಗಳು. ಇವರು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್‌ ಖಾತೆ ತೆರೆಯಲು ಹೇಳುತ್ತಾರೆ. ಬಳಿಕ, ಆರೋಪಿಗಳು ಆ ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಪಡೆದುಕೊಂಡು, ಆನ್‌ ಲೈನ್‌ ಬ್ಯುಸಿನೆಸ್‌ ಮಾಡುವುದಾಗಿ ಹೇಳುತ್ತಿದ್ದರು. ಬಳಿಕ ಮುಗ್ದರ ಬ್ಯಾಂಕ್‌ ಖಾತೆ ಮಾಹಿತಿಯನ್ನು ಸೈಬರ್‌ ವಂಚಕರ ಕೈಗಿಡುತ್ತಿದ್ದರು.

ನಂತರ, ಸೈಬರ್ ವಂಚಕರು ಈ ಬ್ಯಾಂಕ್ ಖಾತೆಗಳನ್ನು ಇಟ್ಟುಕೊಂಡು, ಶ್ರೀಮಂತ ಜನರಿಗೆ ವಿಡಿಯೊ ಕಾಲ್‌, ಡಿಜಿಟೆಲ್‌ ಅರೆಸ್ಟ್‌ ಸೇರಿದಂತೆ ಹಲವು ವಿಧಾನಗಳಲ್ಲಿ ಬ್ಲ್ಯಾಕ್‌ ಮೇಲ್‌ ಮಾಡುತ್ತಾರೆ. ಬಳಿಕ, ವಂಚಕರ ಜಾಲಕ್ಕೆ ಸಿಲುಕಿದವರ ಕಡೆಯಿಂದ ಮುಗ್ದ ಜನರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿಸುತ್ತಾರೆ.

Leave a Reply

Your email address will not be published. Required fields are marked *

error: Content is protected !!