May 5, 2026

ಮಂಗಳೂರು: ಜ್ಯೂಸ್ ನಲ್ಲಿ ಮತ್ತು ಬರುವ ಔಷಧ ಹಾಕಿ ಅತ್ಯಾಚಾರ: ಯುವತಿಯ ವೀಡಿಯೊ ಮಾಡಿ ಬ್ಲ್ಯಾಕ್ ಮೇಲ್

0
image_editor_output_image-1186223328-1733464565261.jpg

ಮಂಗಳೂರು: ಸಹಾಯ ಮಾಡುವ ನೆಪದಲ್ಲಿ ಮನೆಗೆ ಬಂದು ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ತಮ್ಮ ಅತ್ಯಾಚಾರ ನಡೆಸಿದ್ರೆ, ಅಣ್ಣ ಲೈಂಕಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ಥೆ ಯುವತಿಯೊಬ್ಬಳು ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡಿದ್ದಾಳೆ.

ಜು. 21ರಂದು ಸಂತ್ರಸ್ಥೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ನಗರದ ಕದ್ರಿ ಬಳಿ ಕಾರು ಕೆಟ್ಟು ಹೋಗಿದೆ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್‌ ಸವಾರ ಮೊಹಮ್ಮದ್‌ ಶಫಿನ್‌ ಎಂಬಾತ ಕಾರನ್ನು ಸರಿಪಡಿಸಿ, ಬಳಿಕ ಆಕೆಯನ್ನು ಅದೇ ಕಾರಿನಲ್ಲಿ ಕೊಡಿಯಾಲ್ ಬೈಲಿನ ಅಪಾರ್ಟ್‌ಮೆಂಟ್‌ ಒಂದಕ್ಕೆ ಬಿಟ್ಟು ಬಂದಿದ್ದ. ಈ ವೇಳೆ ಆತ ಆಕೆಯ ಮೊಬೈಲ್‌ ನಂಬರ್‌ ಪಡೆದಿದ್ದ. ಆ. 8ರಂದು ಯುವತಿಯ ಮನೆ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ವಾಸವಿರುವುದರಿಂದ ಯುವತಿ ಸಹಾಯಕ್ಕಾಗಿ ಶಫಿನ್‌ಗೆ ಕರೆ ಮಾಡಿದ್ದಾಳೆ.

ಆತ ತನ್ನ ಪರಿಚಿತ ರಿಪೇರಿಯವನನ್ನು ಯುವತಿಯ ಮನೆಗೆ ಕರೆದುಕೊಂಡು ಬಂದು ರಿಪೇರಿ ಮಾಡಿಸಿ ಬಳಿಕ ಮೆಕನಿಕನನ್ನು ಬಿಟ್ಟು ಬರುತ್ತೇನೆ ಎಂದು ಹೇಳಿ ಅಲ್ಲಿಯವರೆಗೆ ಫ್ರಿಡ್ಜ್ ಆನ್‌ ಮಾಡಬೇಡಿ ಎಂದು ಸೂಚಿಸಿದ್ದ.

ಕೆಲವು ಹೊತ್ತಿನ ಬಳಿಕ ಶಫಿನ್‌ ವಾಪಸು ಬಂದಿದ್ದು, ಈ ವೇಳೆ ಹಣ್ಣು ಹಾಗೂ ಜ್ಯೂಸ್‌ ತಂದಿದ್ದ. ಜ್ಯೂಸ್‌ ಕುಡಿದ ಯುವತಿ ನಿದ್ದೆಗೆ ಜಾರಿದ್ದು, ಎಚ್ಚರಗೊಂಡಾಗ ಅನುಮಾನಗೊಂಡು ವಿಚಾರಿಸಿದಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದ. ಜತೆಗೆ ಮುಂದೆಯೂ ಸಹಕರಿಸಬೇಕು. ಇಲ್ಲದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಮಾಡಿರುವ ವೀಡಿಯೋವನ್ನು ಹಾಕುವುದಾಗಿ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾನೆ ಮತ್ತು ಜತೆಗೆ ತನ್ನ ಕಾರನ್ನು ಆತ ಇಟ್ಟುಕೊಂಡಿದ್ದ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!