March 21, 2026

ಫರಂಗಿಪೇಟೆ: ಮಾದಕ ವಸ್ತು ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ: ಇಬ್ಬರು ಆರೋಪಿಗಳ ಬಂಧನ

0
image_editor_output_image-2112404992-1732943751088.jpg

ಫರಂಗಿಪೇಟೆ: ಇಬ್ಬರು ಯುವಕರು ಮಾದಕ ವಸ್ತು ಸೇವನೆ ಮಾಡಿದ ನಶೆಯಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ.

ಪುದು ಗ್ರಾಮ, ಬಂಟ್ವಾಳ ನಿವಾಸಿಗಳಾದ ಮೊಹಮ್ಮದ್ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ (36) ಬಂಧಿತ ಆರೋಪಿಗಳು.

ದಿನಾಂಕ: 29.11.2024 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ಪುದು ಗ್ರಾಮದ ಕುಂಪನಮಜಲು ಎಂಬಲ್ಲಿ ರಸ್ತೆಯಲ್ಲಿ ಯುವಕರು ಮಾದಕವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಮಾಹಿತಿ ಬಂದ ಮೇರೆಗೆ, ಹರೀಶ್ ಎಮ್ ಆರ್ , ಪಿ ಎಸ್ ಐ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋದಾಗ ಅಲ್ಲಿ ಇಬ್ಬರು ಯುವಕರು ಮಾದಕ ವಸ್ತು ಸೇವನೆ ಮಾಡಿದ ನಶೆಯಲ್ಲಿದ್ದಂತೆ ಕಂಡು ಬಂದಿರುವುದರಿಂದ ಅವರನ್ನು ವಿಚಾರಿಸಲಾಗಿ, ಅವರುಗಳು ಪುದು ಗ್ರಾಮ, ಬಂಟ್ವಾಳ ನಿವಾಸಿಗಳಾದ 01).ಮೊಹಮ್ಮದ್ ದಾವೂದ್ ಹಕೀಂ, 02). ಮೊಹಮ್ಮದ್ ಮುಸ್ತಾಫ (36) ಎಂಬುದಾಗಿದ್ದು, ಅವರುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಮಾದಕದ್ರವ್ಯ ಸೇವಿಸಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅ ಕ್ರ ನಂಬ್ರ 104/2024 ಕಲಂ: 27 (b) NDPS ACT -1985 ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!