February 3, 2026

ಹಿರೇಹಳ್ಳ: ಸ್ನಾನಕ್ಕಿಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತ್ಯು

0
image_editor_output_image-1669343945-1731915124920.jpg

ಯಾದಗಿರಿ: ಹಳ್ಳಕ್ಕೆ ಸ್ನಾನಕ್ಕಿಳಿದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಹಿರೇ ಹಳ್ಳ ಎಂಬಲ್ಲಿ ನಡೆದಿದೆ.

ದೇವತ್ಕಲ್ ಗ್ರಾಮದ ಶ್ರೇಯಣ್ಣ (8), ಯುವರಾಜ (9) ಮೃತಪಟ್ಟ ಇಬ್ಬರು ಬಾಲಕರು ರವಿವಾರ (ನ.17) ಮಧ್ಯಾಹ್ನ ಹಳ್ಳದಲ್ಲಿ ಈಜಾಡಲು ಹೋಗಿ ನಾಪತ್ತೆಯಾಗಿದ್ದರು.

ಹಳ್ಳದ ದಂಡೆಯಲ್ಲಿ ಬಾಲಕರ ಬಟ್ಟೆಗಳು ಇರುವುದು ಕಂಡು ಕುಟುಂಬಸ್ಥರು ಹುಡುಕಾಟವನ್ನು ನಡೆಸಿ ನಂತರ ಪೊಲೀಸರಿಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!