February 3, 2026

ದುಬೈ: ಸಮುದ್ರದಲ್ಲಿ ಮುಳುಗಿ ಕಾಸರಗೋಡಿನ ಬಾಲಕ ಮೃತ್ಯು

0
n6396759471731914318111753b374262b7e119c80cca087f322b59bcd6551c2d02928be48cb750e7f8887d.jpg

ಕಾಸರಗೋಡು: ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಮೂಲದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ.

ಚೆಂಗಳ ಥೈವಲಪ್ಪು ನಿವಾಸಿ, ದುಬೈನ ಬಟ್ಟೆ ವ್ಯಾಪಾರಿ ಎ.ಪಿ.ಅಶ್ರಫ್ ಮತ್ತು ನಸೀಮಾ ದಂಪತಿಯ ಪುತ್ರ ನ ಮಫಾಝ್ (15) ಮೃತಪಟ್ಟ ಬಾಲಕ. ದುಬೈ ನ್ಯೂ ಇಂಡಿಯನ್ ಮಾಡೆಲ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದ.

ಶುಕ್ರವಾರ ಮನ್ಸಾರ್ ಬೀಚ್ ಗೆ ತೆರಳಿದ್ದ ವೇಳೆ ದುರ್ಘನೆ ನಡೆದಿದೆ ಎನ್ನಲಾಗಿದೆ.ರಜಾದಿನವಾದ ಶುಕ್ರವಾರ ಮಫಾಸ್ ತನ್ನ ಕುಟುಂಬದೊಂದಿಗೆ ಮನ್ಸರ್ ಬೀಚ್ ಗೆ ಬಂದಿದ್ದರು. ಚೆಂಡಿನೊಂದಿಗೆ ಆಡುವಾಗ ಚೆಂಡು ಸಮುದ್ರಕ್ಕೆ ಬಿದ್ದಾಗ, ಅವನು ಅದನ್ನು ತೆಗೆದುಕೊಳ್ಳಲು ಹೋಗಿ ಇದ್ದಕ್ಕಿದ್ದಂತೆ ಕಡಲಿನ ಸೆರೆಗೆ ಸಿಕ್ಕಿ ಕೊಚ್ಚಿ ಹೋಗಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!