March 21, 2026

ಭೀಕರ ರಸ್ತೆ ಅಪಘಾತ: ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾದ ಬಾಲನಟ ಗಂಭೀರ ಗಾಯ

0
n63954645817318137751336a80c9b869a48b94785ee5743692e2a764df48837a213e8d78210c79af53da53.jpg

ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಕಾಟೇರ ಸಿನಿಮಾದ ಬಾಲನಟ ಮಾಸ್ಟರ್ ರೋಹಿತ್ ಸೇರಿ ಹಲವರು ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ನಡೆದಿದೆ.

ಕಾರು ಹಾಗೂ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ನಟ ದರ್ಶನ್ ನಟನೆಯ ಕಾಟೇರಾ ಸಿನಿಮಾದಲ್ಲಿ ನಟಿಸಿದ್ದ ಬಾಲನಟ ಮಾಸ್ಟರ್ ರೋಹಿತ್, ತಾಯಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

ಮಾಸ್ಟರ್ ರೋಹಿತ್ ವಸಡು ಮುರಿದಿದ್ದು, ತಲೆಗೆ ಗಾಯವಾಗಿದೆ. ಅವರ ತಾಯಿ ಛಾಯಾಲಕ್ಷ್ಮೀ ಅವರ ಕೈ, ಕಾಲಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!