ಕೋಳಿ ಮೊಟ್ಟೆ ದರದಲ್ಲಿ ಏರಿಕೆ
ಉಡುಪಿ: ಈಗಾಗಲೇ ಈರುಳ್ಳಿ ಶತಕದ ಅಂಚಿಗೆ ಬಂದಿದ್ದು, ತರಕಾರಿಗಳು ಕೂಡ ಏರಿಕೆಯಾಗಿದೆ. ಅದರ ಜೊತೆಗೆ ಕೋಳಿ ಮೊಟ್ಟೆ ದರವೂ ಗಗನಕ್ಕೇರಿದೆ.
ಕೋಳಿ ಮೊಟ್ಟೆ ದರ ಕಳೆದ ವಾರ 7 ಇತ್ತು, ಈ ವಾರ ಮೊಟ್ಟೆದರ 7.50 ಆಗಿದೆ. ಇದರಿಂದ ಮೊಟ್ಟೆ ಪ್ರಿಯರ ಜೇಬಿಗೆ ಹೊರೆ ಬಿದ್ದಿದೆ. ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವುದರಿಂದ ದರ ಏರಿಕೆಯಾಗಿದೆ. ಒಂದು ಮೊಟ್ಟೆಗೆ ಸಗಟು ದರದಲ್ಲಿ ₹6 ಇದ್ದರೆ, ಚಿಲ್ಲರೆ ದರ ₹7.50 ಆಗಿದೆ
ಕೋಳಿಗೆ ಹಾಕುವ ಆಹಾರದ ಬೆಲೆ ಅಧಿಕವಾಗುತ್ತಲೇ ಇದೆ. ಇದರಿಂದ ಕೋಳಿ ಸಾಕಣೆಗಾರರಿಗೆ ತೊಂದರೆಯಾಗಿದೆ. ಉತ್ಪಾದನೆ ವೆಚ್ಚ ಹೆಚ್ಚಳವಾಗಿರುವುದರಿಂದ ಮೊಟ್ಟೆಯ ದರ ಕೂಡ ಏರಿಕೆಯಾಗಿದೆ.




