October 22, 2024

ಬಂಟ್ವಾಳ: ಟೆಸ್ಟ್‌ ಡ್ರೈವ್ ನೆಪದಲ್ಲಿ ಶೋ ರೂಮ್‌ ಬೈಕ್‌ ಸಮೇತ ಪರಾರಿ..! ಹುಡುಕಿ ಕೊಡಲು ಮನವಿ.

0

ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಶೋ ರೂಮ್‌ ಒಂದರಲ್ಲಿ ಈ ಘಟನೆ ನಡೆದಿದೆ. ಯಮಹಾದ ಯಶಸ್ವಿ ರೈಸ್‌ ಶೋರೂಮ್‌ನಲ್ಲಿ ಈ ಘಟನೆ ನಡೆದಿದ್ದು ಬೈಕ್ ಸಮೇತ ಗಿರಾಕಿ ನಾಪತ್ತೆಯಾಗಿದ್ದಾನೆ. ಬೈಕ್ ಖರೀದಿಗೆ ಬಂದಿದ್ದ ಯುವಕ ಟೆಸ್ಟ್‌ ಡ್ರೈವ್ ಕೇಳಿದ್ದು, ಶೋ ರೂಮಿನಲ್ಲಿದ್ದ ನೀಲಿ ಬಣ್ಣದ R15 V ತೆಗೆದುಕೊಂಡು ಹೋಗಿದ್ದ. ಆದರೆ ಹಲವು ಸಮಯ ಕಳೆದರೂ ಆತ ವಾಪಾಸು ಬಾರದೇ ಇದ್ದಾಗ ಸಿಬ್ಬಂದಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ಆತ ಬೈಕ್ ಸಮೇತ ಮಂಗಳೂರು ಕಡೆ ಪ್ರಯಾಣಿಸಿದ ಮಾಹಿತಿ ಲಭ್ಯವಾಗಿದೆ.

ನೀಲಿ ಬಣ್ಣದ ಹೊಸ R15 V ಬೈಕ್ ಕಾಣ ಸಿಕ್ಕರೆ ತಕ್ಷಣ ಮಾಹಿತಿ ನೀಡಿದ ಅಂತ ಶೋ ರೂಮ್ ಮಾಲೀಕರು ಮನವಿ ಮಾಡಿದ್ದಾರೆ. ಮೊಬೈಲ್ ಸಂಖ್ಯೆ 9164160081/89706260754 ಇದಕ್ಕೆ ಮಾಹಿತಿ ನೀಡಿ ಅಂತ ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!