August 12, 2026

ಕಟಪಾಡಿ ಜಂಕ್ಷನ್‌ನಲ್ಲಿ ಸರಣಿ ಅಪಘಾತ: ವಾಹನಗಳು ಜಖಂ

0
image_editor_output_image1772193359-1729225675365.jpg

ಕಟಪಾಡಿ: ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ಗುರುವಾರ ಸರಣಿ ಅಪಘಾತ ಸಂಭವಿಸಿದೆ.

ತಾಂತ್ರಿಕ ತೊಂದರೆಯಿಂದ ಟ್ಯಾಂಕ್‌ವೊಂದು ಕಾರು, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಪರಿಣಾಮ ಕಟಪಾಡಿ ಜಂಕ್ಷನ್‌ನ ಸಿಸಿ ಕ್ಯಾಮರಾ ಸಹಿತ ವಾಹನಗಳು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವಾಹನಗಳು ಉಡುಪಿಯತ್ತ ತೆರಳುತ್ತಿದ್ದವು ಎಂದು ತಿಳಿದು ಬಂದಿದೆ. ಪವಾಡ ಸದೃಶವಾಗಿ ಕಾರಿನಲ್ಲಿದ್ದರೂ, ದ್ವಿಚಕ್ರ ವಾಹನ ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದ್ದು, ಟ್ಯಾಂಕರ್ ಸುಮಾರು ದೂರ ಚಲಿಸಿ ಮತ್ತೆ ನಿಂತಿದೆ.

Leave a Reply

Your email address will not be published. Required fields are marked *

You may have missed

error: Content is protected !!