May 6, 2026

ಮೊಬೈಲ್ ಪೋನ್ ಚಾರ್ಜ್ ಹಾಕುವಾಗ ಕರೆಂಟ್ ಶಾಕ್: ವಿದ್ಯಾರ್ಥಿ ಸಾವು

0
image_editor_output_image604564936-1720250872102.jpg

ಬೆಂಗಳೂರು: ಮೊಬೈಲ್ ಪೋನ್ ಚಾರ್ಜ್ ಹಾಕಲು ಹೋದಾಗ ಕರೆಂಟ್ ಶಾಕ್ ನಿದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಜುನಾಥ್ ನಗರದ‌ ವರ್ಷಿಣಿ ಜೆಂಟ್ಸ್ ಪಿಜಿಯಲ್ಲಿ ನಡೆದಿದೆ.

ಬೀದರ್ ಮೂಲದ ಶ್ರೀನಿವಾಸ್ (24) ಮೃ*ತಪಟ್ಟ ವಿದ್ಯಾರ್ಥಿ.

ಸಾಫ್ಟ್ವೇರ್ ಕೋರ್ಸ್ ಮಾಡಲೆಂದು ಬೆಂಗಳೂರಿಗೆ ಬಂದು ಮಂಜುನಾಥ್ ನಗರದ‌ ಪಿಜಿಯಲ್ಲಿದ್ದ. ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ತನ್ನ ರೂಮ್ನಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋಗಿದ್ದಾಗ ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ‌.

ಮೊಬೈಲ್ ಚಾರ್ಜಿಂಗ್ ವೈರ್ ಡ್ಯಾಮೇಜ್ ಆಗಿರುವುದು ಗೊತ್ತಾಗಿದೆ. ಸಾವಿಗೆ ಇದೇ ಕಾರಣವಾಯ್ತಾ ಎನ್ನುವ ಅನುಮಾನ ವ್ಯಕ್ತಪಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!