November 22, 2024

15,000 ರೂ. ಲಂಚಕ್ಕೆ ಬೇಡಿಕೆ: ಮಹಾನಗರ ಪಾಲಿಕೆ ವಲಯ ಸಹಾಯಕ, ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ

0

ದಾವಣಗೆರೆ: ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹಾನಗರ ಪಾಲಿಕೆ ವಲಯ ಕಚೇರಿ-1ರ ಪ್ರಥಮ ದರ್ಜೆ ಸಹಾಯಕ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪಾಲಿಕೆ ಎಸ್.ಡಿ.ಎ. ವೈ.ಲಕ್ಕಪ್ಪ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಿ.ಅನ್ನಪೂರ್ಣ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದವರು.

ದಾವಣಗೆರೆ ಬೇತೂರು ರಸ್ತೆಯಲ್ಲಿರುವ ಇಮಾಂ ನಗರ ವಾಸಿ, ಹಿಟ್ಟಿನ ಗಿರಣಿ ಕೆಲಸದ ಬಿ.ಚಂದ್ರಶೇಖರ ಎಂಬುವರು ತಮ್ಮ ಹಿಟ್ಟಿನ ಗಿರಣಿ ಮನೆ, ವಾಸದ ಮನೆ ಮತ್ತು ಖಾಲಿ ಜಾಗದ ಅಳತೆ ತಿದ್ದುಪಡಿ ಹಾಗೂ ಇ-ಸ್ವತ್ತು ಮಾಡಿಸಲು ಮಹಾನಗರ ಪಾಲಿಕೆ ವಲಯ-1 ಕಛೇರಿಗೆ ಅರ್ಜಿ ಸಲ್ಲಿಸಿದ್ದರು. ಸದರಿ ಕೆಲಸ ಮಾಡಿಕೊಡಲು ಎಸ್.ಡಿ.ಎ. ಲಕ್ಕಪ್ಪ 15,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!