May 6, 2026

ಸರಳಜೀವಿ ಕೋಟ ಶ್ರೀನಿವಾಸ ಪೂಜಾರಿ‌ ಕೋಟಿ ಆಸ್ತಿಯ‌ ಒಡೆಯ: ಕೋಟಗಿಂತ ಪತ್ನಿಯೇ ಶ್ರೀಮಂತ

0
image_editor_output_image-1421256125-1712180104032.jpg

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆ ತಮ್ಮ ಆಸ್ತಿ ವಿವರ ಸಲ್ಲಿಸರುವ ಕೋಟ ಶ್ರೀನಿವಾಸ ಪೂಜಾರಿ ಕುಟುಂಬ 3.5 ಕೋಟಿ ಒಡೆಯ.

ತಮ್ಮ ಅಫಿಡವಿಟ್ ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ನಿ ಶಾಂತಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರ ಕೈಯಲ್ಲಿ 90 ಸಾವಿರ ನಗದು ಹಣ ಇದ್ದು, ಹೆಂಡತಿ ಕೈಯಲ್ಲಿ 20 ಸಾವಿರ ಹಣ ಇದೆ. ಅಫಿಡವಿಟ್ ನಲ್ಲಿರುವ ಮಾಹಿತಿ ಪ್ರಕಾರ ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬ ಸ್ಥಿರಾಸ್ತಿ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 3,58,91,020 ರೂಪಾಯಿ ಆಗಿದೆ. ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬದ ಒಟ್ಟು 1,04,44,645 ರೂಪಾಯಿ ಸಾಲ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!