May 6, 2026

ಶೋಭಾ ಕರಂದ್ಲಾಜೆ ಬಳಿಯಿದೆ 1 KG ಚಿನ್ನದ ಬಿಸ್ಕೆಟ್: ಒಟ್ಟು ಆಸ್ತಿ ಎಷ್ಟು ಕೋಟಿ ಇದೆ ಗೊತ್ತೇ?

0
image_editor_output_image1673096385-1712179944891.jpg

ಬೆಂಗಳೂರು: ಉಡುಪಿ ಚಿಕ್ಕಮಗಳೂರು ಕ್ಷೇತ್ರ ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅದೃಷ್ಠದ ಪರಿಕ್ಷೆಗೆ ಇಳಿದಿರುವ ಸಂಸದೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಿದ್ದಾರೆ.

ಇದರ ಜೊತೆ ಅವರು ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದು, ಶೋಭಾ ಕರಂದ್ಲಾಜೆ ಅವರ ಬಳಿ 16.02 ಕೋಟಿ ಆಸ್ತಿ ಇದೆ.

ಶೋಭಾ ಕರಂದ್ಲಾಜೆ ಅವರ ಬಳಿ ಚರಾಸ್ತಿ – 9.23 ಕೋಟಿ ರೂ. ಹಾಗೂ ಸ್ಥಿರಾಸ್ತಿ – 6.78 ಕೋಟಿ ರೂ. ಮೌಲ್ಯ ಇದ್ದು . ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 4.06 ಕೋಟಿ ರೂಪಾಯಿ ಸಾಲ ಮಾಡಿದ್ದಾರೆ. ಅಲ್ಲದೆ ಶೋಭಾ ಕರಂದ್ಲಾಜೆ ಬಳಿ 1 kg ಚಿನ್ನದ ಬಿಸ್ಕಟ್ (68.40 ಲಕ್ಷ ಮೌಲ್ಯ) ಹಾಗೂ 650‌ ಗ್ರಾಂ ಚಿನ್ನದ ಆಭರಣಗಳಿವೆ.

1620 ಗ್ರಾಂ ಬೆಳ್ಳಿ ಆಭರಣ ‌ಹಾಗೂ ಬೆಳ್ಳಿ ವಸ್ತುಗಳು ಇವೆ. ಶೋಭಾ ಕರಂದ್ಲಾಜೆ ಅವರ ವಾರ್ಷಿಕ ಆದಾಯ 2022-23ರಲ್ಲಿ 24.90 ಲಕ್ಷ ರೂಪಾಯಿ. ಶೋಭಾ ಕರಂದ್ಲಾಜೆ ಬಳಿ ಇರುವ ನಗದು ಹಣ 1,71,000 ರೂ. ಶೋಭಾ ಕರಂದ್ಲಾಜೆ ವಿರುದ್ಧ ಒಟ್ಟು ನಾಲ್ಕು ಮೊಕದ್ದಮೆಗಳು ಇತ್ಯರ್ಥಕ್ಕೆ ಬಾಕಿ ಇವೆ. ಇದರಲ್ಲಿ ಎರಡು ಕ್ರಿಮಿನಲ್ ಕೇಸ್, 1 ಮಾನನಷ್ಟ ಮೊಕದ್ದಮೆ ಇದೆ

Leave a Reply

Your email address will not be published. Required fields are marked *

error: Content is protected !!