February 4, 2026

ಕಾರುಗಳ ನಡುವೆ ಢಿಕ್ಕಿ: ಇಬ್ಬರು ಮೃತ್ಯು, 6 ಮಂದಿಗೆ ಗಾಯ

0
image_editor_output_image-163075386-1710805699473.jpg

ಕಲಬುರಗಿ: ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟು, 6 ಜನರು ಗಾಯಗೊಂಡ ಘಟನೆ ಶಹಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಭಂಕೂರ ಹತ್ತಿರ ಶನಿವಾರ ನಡೆದಿದೆ.

ಮೃತರನ್ನು ಮುಂಬೈ ಮೂಲದ ಶಾಕೀರ್ (30) ಮತ್ತು ಜಹೀರ್ (22) ಎಂದು ಗುರುತಿಸಲಾಗಿದೆ.
ಮೃತ ಶಾಕೀರ್ ಮತ್ತು ಜಹೀರ್ ಬಟ್ಟೆ ವ್ಯಾಪಾರ ಮಾಡುತ್ತಿದ್ದರು.

ಬಟ್ಟೆ ಮಾರಾಟಕ್ಕೆಂದು ಶಾಕೀರ್, ಜಹೀರ್ ಮತ್ತು ಇನ್ನೊಬ್ಬ ಸೇರಿ ಒಟ್ಟು ಮೂರು ಜನ ಸ್ವಿಫ್ಟ್ ಕಾರಿನಲ್ಲಿ ಕಲಬುರಗಿಯಿಂದ ಶಹಾಪುರ ಕಡೆಗೆ ಹೊರಟಿದ್ದರು.

ಎದುರಿನಿಂದ ಬರುತ್ತಿದ್ದ ಸ್ಕಾರ್ಪಿಯೋ ಕಾರು ಮತ್ತು ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಶಾಕೀರ್ ಮತ್ತು ಜಹೀರ್ ಸಾವನ್ನಪ್ಪಿದ್ದಾರೆ. ಇವರೊಡನೆ ಇದ್ದ ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ.

ಸ್ಕಾರ್ಪಿಯೋ ಕಾರಿನಲ್ಲಿದ್ದ ಐವರಿಗೆ ಗಾಯಗಳಾಗಿವೆ. ಈ ಸಂಬಂಧ ಶಹಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!