September 20, 2024

ಸುಳ್ಯ: ಮಿಲಿಟರಿ ಗ್ರೌಂಡ್ ನೀರು ಸರಬರಾಜು ಆಗುತ್ತಿರುವ ಪೈಪಿನ ಮೇಲೆ ಜೆಸಿಬಿ ಚಲಿಸಿ ನೀರು ಪೋಲು: ಸಾರ್ವಜನಿಕರಿಂದ ಆಕ್ರೋಶ

0

ಸುಳ್ಯ: ಜಯನಗರ ಕುಡಿಯುವ ನೀರು ಸರಬರಾಜಿನ ಮುಖ್ಯ ಪೈಪಿನ ಮೇಲೆ ಜೆಸಿಬಿ ಚಲಿಸಿ ಪೈಪು ಮುರಿದು ನೀರು ಪೋಲಾಗುತ್ತಿದೆ. ಮಿಲಿಟರಿ ಗ್ರೌಂಡ್ ಸಮೀಪ ಜಾಗದ ಸಮತಟ್ಟು ಮಾಡಲು ಜೆಸಿಬಿ ಅನ್ನು ಕೊಂಡೊಯ್ಯುವ ಸಂದರ್ಭ ಕುಡಿಯುವ ನೀರಿನ ಸಂಪರ್ಕ ಹೊಂದಿರುವ ಪೈಪಿನ ಮೇಲೆ ಚಲಿಸಿ ಪೈಪು ತುಂಡಾಗಿ ಬಹಳಷ್ಟು ನೀರು ಪೋಲಾಗುತ್ತಿದೆ.

ಈ ಕಾರಣದಿಂದ ಜಯನಗರ ಪರಿಸರದ ಹಲವಾರು ಮನೆಗಳಿಗೆ ನೀರು ಬಾರದೆ ಸ್ಥಳೀಯ ನಿವಾಸಿಗಳು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಹಲವಾರು ದಿನಗಳಿಂದ ಜಯನಗರದ ರುದ್ರಭೂಮಿ ಪರಿಸರದಲ್ಲಿರುವ ಹತ್ತು ಹಲವಾರು ಮನೆಗಳಿಗೆ ನೀರು ಬಾರದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ದೂರನ್ನು ನೀಡಿದರೆ ಅದು ಸರಿ ಇಲ್ಲ ಇದು ಸರಿ ಇಲ್ಲ ಎಂದು ಉತ್ತರವನ್ನು ನೀಡಿ ಹೋಗುತ್ತಾರೆ ವಿನಹ ಸಾರ್ವಜನಿಕರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಸಾರ್ವಜನಿಕರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಮೊದಲು ಬರುವ ನೀರಿನಲ್ಲಿ ಮಡ್ದು ಬರುತ್ತಿತ್ತು ಇದೀಗ ಕಳೆದ ಒಂದು ವಾರದಿಂದ ಅದು ಕೂಡ ಬರುವುದಿಲ್ಲ. ಜನರಿಗೆ ಸಮಸ್ಯೆಗಳನ್ನು ಹೇಳುವುದು ಮಾತ್ರ ಅಭ್ಯಾಸವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಸ್ಪಂದನೆ ಮಾತ್ರ ಸಿಗುವುದಿಲ್ಲ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!