February 4, 2026

ಜಿ.ಎಚ್ ಎಮ್ ಫೌಂಡೇಶನ್  ಮೂಲರಪಟ್ಣ ವತಿಯಿಂದ ಎಲ್ ಕೆ.ಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಪದವಿ ಪುರಸ್ಕಾರ ಸಮಾರಂಭ

0
image_editor_output_image-1616460977-1709791160931

ಮೂಲರಪಟ್ಣ: ಜಿ. ಎಚ್. ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಅಧೀನದಲ್ಲಿರುವ ಎಲ್ ಕೆ ಜಿ ಮತ್ತು ಯುಕೆಜಿ ತರಗತಿ ವಿದ್ಯಾರ್ಥಿಗಳ ಪದವಿ ಪುರಸ್ಕಾರ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 06-03-2024 ರ ಬುಧವಾರ ಶಾಲಾ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ. ಎಚ್. ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ಗೌರವಾನ್ವಿತ ಅಧ್ಯಕ್ಷರಾದ ಮೊಹಮ್ಮದ್ ಶಾಲಿ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಸಂಸ್ಥೆಯ ಶಿಕ್ಷಣ ಹಾಗೂ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಜ! ‌ಝಕರಿಯ್ಯಾ ಫರ್ವೀಝ್ ಶಿಕ್ಷಣದ ಮಹತ್ವದ ಕುರಿತು ಅರ್ಥಪೂರ್ಣವಾದ ವಿಚಾರ ಮಂಡನೆ ಮಾಡಿದರು.

ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವ ಸಲಹೆಗಾರಾದ ಎಮ್ ಬಿ ಅಶ್ರಫ್, ಎಕ್ಸಿಕ್ಯೂಟಿವ್ ಹೆಡ್ ಹಂಝ ಗುತ್ತು, ಅಝಾದ್ನಗರ ಏರಿಯಾ ಎಕ್ಸಿಕ್ಯೂಟಿವ್ ಸದಸ್ಯರಾದ ತೌಹೀದ್ ಎಮ್ ಬಿ,‌ ಮುನೀರ್.ಎ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಅರಳ ಶಾಲಾ ಶಿಕ್ಷಕರು ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶಾಹಿನ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಜಿ. ಎಚ್. ಎಮ್ ಫೌಂಡೇಶನ್ (ರಿ) ಮೂಲರಪಟ್ಣ ಇದರ ಪ್ರಧಾನ ಕಾರ್ಯದರ್ಶಿ ಸಜೀವುಧ್ಧೀನ್ ಎಮ್ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಸಂಸ್ಥೆಯು ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹದ ಕುರಿತು ವಿವರಿಸಿದರು. ಶಾಲಾ ಸಹ ಶಿಕ್ಷಕಿ ದಿವ್ಯ. ಯು ಕಾರ್ಯಕ್ರಮ ನಿರೂಪಿಸಿದರು.
ಎಲ್.ಕೆ.ಜಿ ಶಿಕ್ಷಕಿ ಕುಮಾರಿ ಶಾಹಿಫ ಅತಿಥಿಗಳೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!