March 22, 2026

ವಿಟ್ಲ: ಕಿಡ್ನಿ ವೈಫಲ್ಯಕ್ಕೀಡಾಗಿರುವ ಚಂದಳಿಕೆಯ ಗೀತಾ ಪೂಜಾರಿಯವರಿಗೆ ಡಿ’ ಗ್ರೂಪ್ ವತಿಯಿಂದ ಧನಸಹಾಯ

0
image_editor_output_image-1796337351-1709743093815

ವಿಟ್ಲ: ಸಮೀಪದ ಚಂದಳಿಕೆಯ ದಾಮೋದರ ಪೂಜಾರಿ ಎಂಬವರ ಪತ್ನಿ ಗೀತಾ ಎಂಬವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರಿಗೆ ಕಿಡ್ನಿ ಮರು ಜೋಡಣೆ ಮಾಡಲು
ವಿಟ್ಲ ಡಿ’ ಗ್ರೂಪ್ ವತಿಯಿಂದ ಧನ ಸಹಾಯ ಮಾಡಲಾಯಿತು.

ಡಿ’ ಗ್ರೂಪ್ ಪದಾಧಿಕಾರಿಗಳು ವಿಟ್ಲ ಪೇಟೆಯಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡಿತ್ತು‌. ಸಂಗ್ರಹವಾದ ಒಟ್ಟು 70,280  ರೂಪಾಯಿಗಳನ್ನು ಗೀತಾ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಡಿ’ ಗ್ರೂಪ್ ಅಧ್ಯಕ್ಷ ವಿ.ಎಚ್.ರಿಯಾಝ್, ಪ್ರಧಾನ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಜತೆ ಕಾರ್ಯದರ್ಶಿ ವಿ.ಕೆ.ಎಂ.ಹಂಝ, ಸಲಹೆಗಾರರಾದ ವಿ.ಕೆ.ಎಂ. ಅಶ್ರಫ್, ಖಲಂದರ್ ಪರ್ತಿಪ್ಪಾಡಿ, ಇಸಾಕ್ ವಿಟ್ಲ, ಸಮದ್ ಮೇಗಿನಪೇಟೆ, ಮಾಧ್ಯಮ ವಕ್ತಾರರಾದ ಮಹಮ್ಮದ್ ಅಲಿ ವಿಟ್ಲ ಮತ್ತು ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿ ಬಶೀರ್ ಬೊಬ್ಬೆಕೇರಿ, ಹಂಝ ವಿಟ್ಲ, ಉಬೈದ್ ವಿಟ್ಲ, ತೌಸೀಫ್ ವಿಟ್ಲ, ರಾಝಿಕ್, ರಫೀಕ್ ಇಂಜಿನಿಯರ್, ಸಫ್ವಾನ್ ವಿಟ್ಲ, ಮನ್ಸೂರ್ ಟಿ.ಎಂ ಎ, ಇಸ್ಮಾಯಿಲ್ ಸೂಪರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!